ಮುಂಬೈ: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್, ಸೆಂಚುರಿ ಬ್ಯಾಂಕ್ ಪತನಗೊಂಡ ಪರಿಣಾಮ ಬಾಂಬೆ ಷೇರು ಮಾರುಕಟ್ಟೆ ವಹಿವಾಟಿನ ಮೇಲೂ ಪರಿಣಾಮ ಬೀರಿತ್ತು. ಏತನ್ಮಧ್ಯೆ ಬುಧವಾರ (ಮಾರ್ಚ್ 15) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲೇ 440 ಅಂಕ ಏರಿಕೆ ಕಂಡಿದೆ.
ಇದನ್ನೂ ಓದಿ:ಬಾಲಿವುಡ್ ನ ಹಿರಿಯ ನಟ, ʼಖೋಪ್ಡಿʼ ಖ್ಯಾತಿಯ ಸಮೀರ್ ಖಾಕರ್ ನಿಧನ
ಬಾಂಬೆ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕವಾಗಿ ಜಪಾನ್, ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಕೂಡಾ ಜಿಗಿತ ಕಂಡಿದೆ. ಮಂಗಳವಾರ ಅಮೆರಿಕ, ಯುರೋಪಿಯನ್ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಕೊನೆಗೊಂಡಿತ್ತು.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 440.04 ಅಂಕಗಳಷ್ಟು ಏರಿಕೆಯಾಗಿದ್ದು, 58,340.23 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 109.60 ಅಂಕ ಜಿಗಿತ ಕಂಡಿದ್ದು, 17,152.90 ಅಂಕಗಳಲ್ಲಿ ವಹಿವಾಟು ನಡೆದಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಮಾರುತಿ ಸುಜುಕಿ, ಟಿಸಿಎಸ್, ರಿಲಯನ್ಸ್, ಏಷಿಯನ್ ಪೇಂಟ್ಸ್, ಅದಾನಿ ಗ್ರೀನ್, ಐಡಿಎಫ್ ಸಿ ಬ್ಯಾಂಕ್, ಆದಿತ್ಯ ಬಿರ್ಲಾ, ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್, ಎಲ್ ಆ್ಯಂಡ್ ಟಿ, ಕೋಟಕ್ ಬ್ಯಾಂಕ್, ಅದಾನಿ ಪೋರ್ಟ್ಸ್, ಷೇರು ಲಾಭಗಳಿಸಿದೆ.