Advertisement

ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 210 ಅಂಕ ಏರಿಕೆ

05:19 PM Aug 17, 2021 | Team Udayavani |

ಮುಂಬಯಿ: ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮಂಗಳವಾರ (ಆಗಸ್ಟ್ 17) 210 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ದಾಖಲೆ ಮಟ್ಟದಲ್ಲಿ ಕೊನೆಗೊಂಡಿದೆ. ಇನ್ಫೋಸಿಸ್, ಟಿಸಿಎಸ್, ಎಚ್ ಯುಎಲ್ ಷೇರುಗಳು ಲಾಭಗಳಿಸುವಂತಾಗಿದೆ.

Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 209.69 ಅಂಕಗಳ ಏರಿಕೆಯೊಂದಿಗೆ 55,792.27 ಅಂಕಗಳ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 51.55 ಅಂಕಗಳ ಏರಿಕೆಯೊಂದಿಗೆ 16,614.60 ಅಂಕಗಳ ಮಟ್ಟದಲ್ಲಿ ವಹಿವಾಟು ಕೊನೆಗೊಂಡಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಟೆಕ್ ಮಹೀಂದ್ರಾ, ಟಿಸಿಎಸ್, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಮತ್ತು ಎಚ್ ಯುಎಲ್ ಷೇರುಗಳು ಶೇ.3ಕ್ಕಿಂತಲೂ ಅಧಿಕ ಲಾಭಗಳಿಸಿದೆ. ಅಲ್ಲದೇ ಇಂಡಸ್ ಇಂಡ್ ಬ್ಯಾಂಕ್, ಎನ್ ಟಿಪಿಸಿ, ಭಾರ್ತಿ ಏರ್ ಟೆಲ್, ಟಾಟಾ ಸ್ಟೀಲ್, ಎಲ್ ಆ್ಯಂಡ್ ಟಿ ಷೇರುಗಳು ನಷ್ಟ ಕಂಡಿದೆ.

ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನಿರುತ್ಸಾಹದ ವಹಿವಾಟಿನ ಪರಿಣಾಮ ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಆರಂಭದಲ್ಲಿ ಇಳಿಕೆ ಕಂಡಿದ್ದು, ನಂತರ ಚೇತರಿಕೆ ಕಾಣುವ ಮೂಲಕ ಸೆನ್ಸೆಕ್ಸ್ ಸೂಚ್ಯಂಕ ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next