ಮುಂಬಯಿ: ವಹಿವಾಟಿನಲ್ಲಿ ಏರಿಕೆಯತ್ತ ಸಾಗಿದ್ದ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಶುಕ್ರವಾರ (ಡಿಸೆಂಬರ್ 10) ಅಲ್ಪ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಇದು ಆಗಲೇ ಬೇಕಿತ್ತು..: ನಾಯಕತ್ವ ಬದಲಾವಣೆ ಬಗ್ಗೆ ಆಕಾಶ್ ಚೋಪ್ರಾ ಮಾತು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 20.46 ಅಂಕಗಳ ಅಲ್ಪ ಇಳಿಕೆಯೊಂದಿಗೆ 58,786.67 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೇವಲ 5.50 ಅಂಕಗಳಷ್ಟು ಇಳಿಕೆಯಾಗಿದ್ದು, 17,511.30 ಅಂಕಗಳ ಮಟ್ಟ ತಲುಪಿದೆ.
ಏಷ್ಯನ್ ಪೇಂಟ್ಸ್, ಗ್ರಾಸಿಂ ಇಂಡಸ್ಟ್ರೀಸ್, ಎಸ್ ಬಿಐ, ಎಸ್ ಬಿಐ ಲೈಫ್ ಇನ್ಸೂರೆನ್ಸ್ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಟೈಟಾನ್ ಕಂಪನಿ, ಎಚ್ ಡಿಎಫ್ ಸಿ, ಕೋಟಕ್ ಮಹೀಂದ್ರ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಷೇರುಗಳು ನಷ್ಟ ಕಂಡಿದೆ.
ಯುರೋಪ್ ಷೇರು ಮಾರುಕಟ್ಟೆಯಲ್ಲಿ ನೆಗೆಟಿವ್ ಟ್ರೆಂಡ್ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆ ಹೂಡಿಕೆದಾರರ ಮೇಲೆ ಬೀರಿದ್ದು ಸೆನ್ಸೆಕ್ಸ್, ನಿಫ್ಟಿ ಇಳಿಕೆಗೆ ಕಾರಣವಾಗಿದೆ. ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ವಹಿವಾಟಿನ ಆರಂಭದಲ್ಲಿಯೇ ಸಂವೇದಿ ಸೂಚ್ಯಂಕ 197 ಅಂಕ ಇಳಿಕೆಯಾಗಿದ್ದು, 58,610 ಮಟ್ಟದಲ್ಲಿ ಮುಂದುವರಿದಿತ್ತು. ನಿಫ್ಟಿ ಕೂಡಾ 36 ಅಂಕ ಕುಸಿತ ಕಂಡಿದ್ದು, 17,480ಕ್ಕೆ ಇಳಿಕೆಯಾಗಿತ್ತು.