ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಶುಕ್ರವಾರ (ಫೆ.04) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 220 ಅಂಕಗಳಷ್ಟು ಇಳಿಕೆ ಕಂಡಿದೆ.
ಇದನ್ನೂ ಓದಿ:ಮುಂದುವರಿದ ಹಿಜಾಬ್- ಕೇಸರಿ ಶಾಲು ವಿವಾದ: ಶಾಲು ಧರಿಸಿ ಬಂದ 300 ಕ್ಕೂ ಅಧಿಕ ವಿದ್ಯಾರ್ಥಿಗಳು
ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಷೇರುಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿರುವದಾಗಿ ವಿಶ್ಲೇಷಕರು ತಿಳಿಸಿದ್ದಾರೆ. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 220.21 ಅಂಕಗಳಷ್ಟು ಇಳಿಕೆಯಾಗಿದ್ದು, 58,567.81 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 72.85 ಅಂಕ ಇಳಿಕೆಯಾಗಿದ್ದು, 17,487.35 ಅಂಕಗಳ ಮಟ್ಟ ತಲುಪಿದೆ.
ಟೈಟಾನ್, ವಿಪ್ರೋ, ಟಿಸಿಎಸ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಟಾಟಾ ಸ್ಟೀಲ್, ಪವರ್ ಗ್ರಿಡ್, ಸನ್ ಫಾರ್ಮಾ, ಐಟಿಸಿ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿದೆ.
ಗುರುವಾರ (ಫೆ.03) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 770.31 ಅಂಕ ಇಳಿಕೆಯಾಗಿದ್ದು, 58,788.02 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 219.80 ಅಂಕ ಕುಸಿದಿದ್ದು, 17,560.20 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.