ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ವಹಿವಾಟು ಗುರುವಾರ (ಜೂನ್ 27) F&O (Furures And Options) expiry ದಿನವಾಗಿದ್ದರ ಪರಿಣಾಮ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯ ಅಂಕಗಳ ಮಟ್ಟ ಮುಟ್ಟುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭವಾದಂತಾಗಿದೆ.
ಇದನ್ನೂ ಓದಿ:Udupi; ಬಸ್ ಗೆ ಡಿಕ್ಕಿ ಹೊಡೆದ ಶೋರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಕಾರು
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ 338.49 ಅಂಕಗಳಷ್ಟು ಏರಿಕೆ ಕಾಣುವ ಮೂಲಕ 79,012.74 ಅಂಕಗಳ ಮಟ್ಟಕ್ಕೆ ತಲುಪುವ ಮೂಲಕ ದಾಖಲೆ ಬರೆದಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ , ಎಚ್ ಡಿಎಫ್ ಸಿ ಬ್ಯಾಂಕ್ ನಂತಹ Heavyweight ಷೇರುಗಳ ನಿಫ್ಟಿ ಸೂಚ್ಯಂಕ 23,900 ಅಂಕಗಳ ಗಡಿ ಮುಟ್ಟಿದ್ದು, ಬಿಎಸ್ ಇ ಸೂಚ್ಯಂಕ 79,000ಅಂಕಗಳ ಗಡಿ ತಲುಪಿತ್ತು.
ಸೂಚ್ಯಂಕ ದಾಖಲೆ ಅಂಕಗಳ ಮಟ್ಟ ತಲುಪಿದ ನಂತರ ಆಲ್ಟ್ರಾ ಟೆಕ್ ಸಿಮೆಂಟ್, ಜೆಎಸ್ ಡಬ್ಲ್ಯು ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭ ಗಳಿಸಿವೆ.
ಮತ್ತೊಂದೆಡೆ ಐಟಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಟಾಟಾ ಕನ್ಸ್ ಲ್ಟೆನ್ಸಿ ಸರ್ವಿಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಏಷಿಯನ್ ಪೇಂಟ್ಸ್ ಷೇರುಗಳು ನಷ್ಟ ಕಂಡಿದೆ.