ಮುಂಬೈ: ಭಾರತದ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿ ಈಗಾಗಲೇ ನಿರ್ಧರಿಸಿದ್ದಾರೆ. ಅಕ್ಟೋಬರ್ ಅಂತ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಬಳಿಕ ತಾನು ನಾಯಕವನ್ನು ತ್ಯಜಿಸುವುದಾಗಿ ಸ್ವತಃ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತೀಯ ನಾಯಕನ ಈ ಹೇಳಿಕೆ ಹಲವರ ಅಚ್ಚರಿಗೆ ಕಾರಣವಾಗಿದೆ. ಟೀಂ ಇಂಡಿಯಾ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಕೂಡಾ ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದು ಆಶ್ಚರ್ಯ ತಂದಿದೆ. ಟಿ20 ವಿಶ್ವಕಪ್ ಬಳಿಕವೂ ವಿರಾಟ್ ಕೊಹ್ಲಿಯೇ ನಾಯಕನಾಗಿರಬೇಕು ಎನ್ನುವುದು ನನ್ನ ಭಾವನೆ. ಅವರು ಇಷ್ಟು ವರ್ಷಗಳ ಕಾಲ ಟೀಂ ಇಂಡಿಯಾಕ್ಕಾಗಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ ಎಂದು ಶಾರ್ದೂಲ್ ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ:ಹಳೆಯ ರಾಯಲ್ ಎನ್ ಫೀಲ್ಡ್ ಅನ್ನೇ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ 15ರ ಬಾಲಕ!
ಈ ವಿಚಾರದ ಬಗ್ಗೆ ವಿರಾಟ್ ಬಗ್ಗೆ ಮಾತನಾಡಲಾಗಿಲ್ಲ. ಈ ಬಾರಿ ಟಿ20 ವಿಶ್ವಕಪ್ ಗೆದ್ದ ಬಳಿಕ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಠಾಕೂರ್ ಹೇಳಿದರು.
ವಿರಾಟ್ ನಾಯಕತ್ವದ ಬಗ್ಗೆ ಮಾತನಾಡಿದ ಅವರು, ವಿರಾಟ್ ನನಗೆ ಯಾವತ್ತೂ ಬೆಂಬಲಕ್ಕೆ ನಿಂತಿದ್ದರು. ನಮ್ಮಿಬ್ಬರ ಸಂಬಂಧ ಉತ್ತಮವಾಗಿದೆ. ನಾನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲು ಇಚ್ಛೆ ಪಡುತ್ತೇನೆ. ನಮ್ಮ ಗರಿಷ್ಠ ಸಾಮರ್ಥ್ಯದಲ್ಲಿ ಆಡಲು ವಿರಾಟ್ ಎಂದಿಗೂ ಬೆಂಬಲ ನೀಡುತ್ತಾರೆ ಎಂದರು.