Advertisement
“ಮಹೀ ಭಾಯ್ ನೇತೃತ್ವದಲ್ಲಿ ಆಡಲು ನಾನು ಬಹಳ ಉತ್ಸುಕನಾಗಿದ್ದೇನೆ. ಸ್ಟಂಪ್ ಹಿಂದೆ ನಿಲ್ಲುವ ಅವರು ಸದಾ ಕಾಲ ನಮಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಅವರು ಆಟಗಾರರಿಗೆ ನೀಡುವ ಸ್ವಾತಂತ್ರ್ಯ ಅಮೋಘ. ಹೀಗಾಗಿ ಕುಟುಂಬದಂತಿರುವ ಚೆನ್ನೈ ತಂಡವನ್ನು ಮರಳಿ ಸೇರಿಕೊಳ್ಳುವ ಕಾತರ ನನ್ನದು’ ಎಂಬುದಾಗಿ ಶಾದೂìಲ್ ಠಾಕೂರ್ ಹೇಳಿದರು.
2018ರಿಂದ 2021ರ ತನಕ ಶಾರ್ದೂಲ್ ಠಾಕೂರ್ ಚೆನ್ನೈ ತಂಡದ ಪರ ಆಡಿದ್ದರು. 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ 2023ರಲ್ಲಿ ಕೋಲ್ಕತಾ ನೈಟ್‌ರೈಡರ್ ಪರ ಆಡಿದರು. ಈ ಬಾರಿ 4 ಕೋಟಿ ರೂ.ಗಳ ದೊಡ್ಡ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದ ಐಪಿಎಲ್ ಸೀಸನ್‌ನಲ್ಲಿ ನನ್ನ ಆಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಈ ಬಾರಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ’ ಎಂದರು. ತಮಿಳುನಾಡು ವಿರುದ್ಧದ ರಣಜಿ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ ಠಾಕೂರ್, ವಿದರ್ಭ ಎದುರಿನ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 75 ರನ್ ಬಾರಿಸಿ ತಂಡದ ನೆರವಿಗೆ ನಿಂತಿದ್ದರು.
Related Articles
Advertisement
2023ರಲ್ಲಿ ಆಡಿದ 11 ಐಪಿಎಲ್ ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಕೇವಲ 7 ವಿಕೆಟ್ ಉರುಳಿಸಿದ್ದರು. ಬ್ಯಾಟಿಂಗ್ ಸರಾಸರಿ ಕೇವಲ 14.13 ಆಗಿತ್ತು.ಯುವ ಬೌಲರ್ ಸಮೀರ್ ರಿಜ್ವಿ, ನ್ಯೂಜಿಲ್ಯಾಂಡ್ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ ಅವರನ್ನೊಳಗೊಂಡ ಈ ಬಾರಿಯ ಚೆನ್ನೈ ತಂಡ ಹೆಚ್ಚು ವೈವಿಧ್ಯಮಯವಾಗಿದೆ.