Advertisement

ಅಭ್ಯಾಸ ಆರಂಭಿಸಿದ ಶಾರ್ದೂಲ್ ಠಾಕೂರ್‌

10:40 PM May 23, 2020 | Sriram |

ಪಾಲ್ಘರ್ (ಮಹಾರಾಷ್ಟ್ರ): ಪೇಸ್‌ ಬೌಲರ್‌ ಶಾರ್ದೂಲ್ ಠಾಕೂರ್‌ ಕೋವಿಡ್-19 ಲಾಕ್‌ಡೌನ್‌ ಬಳಿಕ ಹೊರಾಂಗಣದಲ್ಲಿ ಅಭ್ಯಾಸ ಆರಂಭಿಸಿದ ಭಾರತದ ಮೊದಲ ಕ್ರಿಕೆಟಿಗನಾಗಿದ್ದಾರೆ. ಅವರು ಶನಿವಾರ ಇಲ್ಲಿನ ಪಾಲ್ಘರ್‌ ಜಿಲ್ಲೆಯ ಬೋಯಿಸರ್‌ ಕ್ರೀಡಾಂಗಣದಲ್ಲಿ ಸ್ಥಳೀಯ ಕ್ರಿಕೆಟಿಗರೊಂದಿಗೆ ಅಭ್ಯಾಸಕ್ಕಿಳಿದರು.

Advertisement

ಮಹಾರಾಷ್ಟ್ರ ಸರಕಾರ ಹಳದಿ ಮತ್ತು ಕಿತ್ತಳೆ ವಲಯಗಳ ಸ್ಟೇಡಿಯಂಗಳಲ್ಲಿ ವೈಯಕ್ತಿಕ ಅಭ್ಯಾಸಕ್ಕೆ ಅನುಮತಿ ನೀಡಿದ್ದರಿಂದ ಶಾರ್ದೂಲ್ ‌ಇದರ ಸದುಪಯೋಗ ಪಡೆದರು. ಬೋಯಿಸರ್  ಕ್ರೀಡಾಂಗಣ ಮುಂಬಯಿಯಿಂದ ಸುಮಾರು 110 ಕಿ.ಮೀ. ದೂರದಲ್ಲಿದೆ.


Advertisement

Udayavani is now on Telegram. Click here to join our channel and stay updated with the latest news.

Next