Advertisement
2017ನೇ ಏಪ್ರಿಲ್‌ನಲ್ಲಿ ಈ ಯೋಜನೆಗೆ 4,862 ಕೋಟಿ ರೂ.ಅಂದಾಜು ವೆಚ್ಚ ರೂಪಿಸಲಾಗಿತ್ತು. ಅದಾದ ಒಂದು ವರ್ಷದಲ್ಲಿ ಅಂದಾಜು ವೆಚ್ಚ 5,500 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈಗ ಯೋಜನೆ 6,000 ಕೋಟಿ ರೂ.ಮೀರುವ ಸಾಧ್ಯತೆ ಇದೆ. ಯೋಜನೆಗೆ ತೊಡ ರು ಗಾಲು ಆಗಬಹುದಾಗಿದ್ದ ವನ್ಯಜೀವಿ ಮಂಡಳಿ ಯಿಂದಲೂ ಯೋಜನೆಗೆ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸು ವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
Related Articles
Advertisement
6 ತಾಸು ಉತ್ಪಾದನೆ: ಈ ವಿದ್ಯುದಾಗಾರದಲ್ಲಿ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಬರುವ ಸಮಯದಲ್ಲಿ ಅಂದರೆ, ದಿನಕ್ಕೆ 6 ಗಂಟೆ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತದೆ. ತಲಕಳಲೆ ಜಲಾಶಯ ಎತ್ತರದಲ್ಲಿದ್ದು ಸುರಂಗ ಮಾರ್ಗದ ಮೂಲಕ ಟರ್ಬೈನ್‌ಗಳಿಗೆ ನೀರು ಹರಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಅದಾದ ಬಳಿಕ ನೀರು ಸುರಂಗ ಮಾರ್ಗದ ಮೂಲಕವೇ ಗೇರುಸೊಪ್ಪ ಜಲಾಶಯ ತಲುಪುತ್ತದೆ. ಮತ್ತೆ ಅದೇ ಟರ್ಬೈನ್‌ಗಳನ್ನು ಪಂಪ್‌ಸೆಟ್‌ನಂತೆ ಬಳಸಿ ಗೇರುಸೊಪ್ಪದಿಂದ 500 ಮೀ. ಎತ್ತರದ ತಲಕಳಲೆಗೆ ಹರಿಸಲಾಗುತ್ತದೆ. ಅಂದರೆ ನೀರನ್ನು ವ್ಯರ್ಥ ಮಾಡದಂತೆ ಮರುಬಳಕೆ ಮಾಡಲಾಗುತ್ತದೆ. ವ್ಯಾಪ್‌ಕೋಸ್ ಲಿಮಿಟೆಡ್ ಸಂಸ್ಥೆ ಕಾರ್ಯಸಾಧ್ಯತೆ ವರದಿ ತಯಾರಿಸಿದ್ದು, ಅದರ ಆಧಾರದ ಮೇಲೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ.
ಮತ್ತೊಂದು ಹೋರಾಟಕ್ಕೆ ಸಜ್ಜು: ಮೂರು ತಿಂಗಳ ಹಿಂದಷ್ಟೆ ಹಿಂದಿನ ಸಮ್ಮಿಶ್ರ ಸರ್ಕಾರ ಪ್ರಸ್ತಾಪಿಸಿದ್ದ ಲಿಂಗನಮಕ್ಕಿ ಜಲಾಶಯದ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಗೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರ ವಿರುದ್ಧ ಸಂಘಟಿತ ಹೋರಾಟ ರೂಪಿಸಿದ್ದಲ್ಲದೆ ಬಂದ್ ಸಹ ನಡೆಸಿ ರಾಜ್ಯದ ಗಮನ ಸೆಳೆಯಲಾಗಿತ್ತು. ಈ ಹೋರಾಟಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಬೆಂಬಲ ನೀಡಿತ್ತು. ಪಕ್ಷದ ಶಾಸಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ಹೊಸ ಯೋಜನೆಗೆ ಬಿಜೆಪಿ ಸರ್ಕಾರವೇ ಆಸಕ್ತಿ ವಹಿಸಿದೆ. ಸ್ಥಳೀಯರು ಮತ್ತೆ ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಈಗಾಗಲೇ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿರುವುದರಿಂದ ಯಾವುದೇ ಯೋಜನೆಗಳನ್ನು ಈ ಭಾಗದಲ್ಲಿ ಕೈಗೊಳ್ಳುವಂತಿಲ್ಲ. ನಾವು ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಅಣೆಕಟ್ಟು ಕಟ್ಟುವುದಿಲ್ಲ ಎಂಬ ಮಾತು ಬಿಟ್ಟರೆ ಉಳಿದೆಲ್ಲ ರೀತಿಯೂ ಇದು ಪ್ರಭಾವ ಬೀರಲಿದೆ. ಈ ಯೋಜನೆ ಎಲ್ಲ ರೀತಿಯಿಂದಲೂ ಪರಿಸರಕ್ಕೆ ಹಾನಿ ಮಾಡುತ್ತದೆ.-ಅನಂತ ಹೆಗಡೆ ಆಶೀಸರ, ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ * ಶರತ್ ಭದ್ರಾವತಿ