Advertisement

ಶರತ್‌-ಮಣಿಕಾಗೆ ಒಲಿಂಪಿಕ್ಸ್‌ ಟಿಕೆಟ್‌ : ಒಲಿಂಪಿಕ್ಸ್‌ ಅರ್ಹತೆ ಪಡೆದ ಭಾರತದ ಮೊದಲ ಜೋಡಿ

11:44 PM Mar 20, 2021 | Team Udayavani |

ದೋಹಾ (ಕತಾರ್‌): ಭಾರತಕ್ಕೆ ಒಲಿಂಪಿಕ್‌ ಕ್ರೀಡಾ ಕೂಟದಲ್ಲಿ ಮೊದಲ ಟೇಬಲ್‌ ಟೆನಿಸ್‌ ಪದಕವೊಂದು ಲಭಿಸುವ ಅವಕಾಶವೊಂದು ಉಜ್ವಲಗೊಂಡಿದೆ. ಏಶ್ಯನ್‌ ಕ್ವಾಲಿಫಿಕೇಶನ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್‌ ಎನಿಸಿಕೊಳ್ಳುವ ಮೂಲಕ ಅಚಂತ ಶರತ್‌ ಕಮಲ್‌-ಮಣಿಕಾ ಬಾತ್ರಾ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದು ನಿರೀಕ್ಷೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ.

Advertisement

ಶನಿವಾರದ ಪಂದ್ಯದಲ್ಲಿ ವಿಶ್ವದ 19 ಶ್ರೇಯಾಂಕದ ಶರತ್‌-ಮಣಿಕಾ ಜೋಡಿ, ಕೊರಿಯಾದ 8ನೇ ಶ್ರೇಯಾಂಕದ ಸಾಂಗ್‌ ಸು ಲೀ ಮತ್ತು ಜಿಹೀ ಜಿಯೋನ್‌ ವಿರುದ್ಧ ದಿಟ್ಟ ಹೋರಾಟ ನೀಡಿ ಗೆಲುವು ಸಾಧಿಸಿತು. ಆರಂಭಿಕ ಎರಡು ಸೆಟ್‌ಗಳನ್ನು ಕಳೆದುಕೊಂಡು ನಿರ್ಗಮನ ಖಚಿತ ಎಂಬ ಸ್ಥಿತಿಯಲ್ಲಿದ್ದ ಭಾರತೀಯ ಜೋಡಿ ಅನಂತರದ ನಾಲ್ಕೂ ಸೆಟ್‌ಗಳಲ್ಲಿ ತಿರುಗಿ ಬಿದ್ದ ಪರಿ ಅತ್ಯಂತ ರೋಚಕವಾಗಿತ್ತು. ಅಂತಿಮವಾಗಿ ಇವರು 8-11, 6-11, 11-5, 11-6, 13-11, 11-8 ಅಂತರದ ಗೆಲುವು ದಾಖಲಿದರು.  2018ರ ಏಶ್ಯನ್‌ ಗೇಮ್ಸ್‌ನಲ್ಲಿÉ ಮಣಿಕಾ-ಶರತ್‌ ಜೋಡಿ ಕಂಚಿನ ಪದಕ ಜಯಿಸಿತ್ತು.

“ಇಂದು ಮಣಿಕಾ ಅಮೋಘ ಪ್ರದರ್ಶನ ನೀಡಿದರು. ಅವರನ್ನು ತಡೆಯುವುದೇ ಕಷ್ಟವಾಗಿತ್ತು. ನಾನೂ ನನ್ನ ಪವರ್‌ ಗೇಮ್‌ ಪ್ರದರ್ಶಿಸುವಲ್ಲಿ ಯಶಸ್ವಿಯಾದೆ. ಈ ಪಂದ್ಯಾವಳಿಯಲ್ಲಿ ನಾವು ಗೆದ್ದು ಬರುತ್ತೇವೆಂಬ ನಂಬಿಕೆ ಖಂಡಿತ ಇರಲಿಲ್ಲ. ಮುಂದಿನದು ಒಲಿಂಪಿಕ್ಸ್‌ ಪದಕ. ಇದು ಅತ್ಯಂತ ಕಠಿನ ಸವಾಲು. ಆದರೆ ಗರಿಷ್ಠ ಪ್ರಯತ್ನ ನಡೆಸಲಿದ್ದೇವೆ’ ಎಂದು ಶರತ್‌ ಕಮಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next