Advertisement

ಶರತ್‌ ಅಂಗಡಿಗೆ ಸಿ.ಟಿ. ರವಿ ಭೇಟಿ

12:35 PM Oct 05, 2017 | |

ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಬಿ.ಸಿ.ರೋಡ್‌ನ‌ ಲಾಂಡ್ರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆವರು ಬುಧವಾರ ಭೇಟಿ ನೀಡಿ ಶರತ್‌ ಅವರ ಸಹೋದರಿಗೆ ಸಾಂತ್ವನ ಹೇಳಿದರು.

Advertisement

ನನ್ನ ಸಹೋದರ ಅಮಾಯಕ; ಯಾರೊಬ್ಬರಿಗೂ ಅನ್ಯಾಯ ಮಾಡಿದವನಲ್ಲ. ಅವನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಏಕೈಕ ಸಹೋದರನನ್ನು ಕಳೆದು ಕೊಂಡಿದ್ದೇವೆ ಎಂದು ಶರತ್‌ ಅವರ ಸಹೋದರಿ ಚಂದ್ರಕಲಾ ದುಃಖೀಸಿದರು. ಹತ್ಯೆಗಳ ಸಂಚನ್ನು ಸಂಚನ್ನು  ಎಲ್ಲಿ ರೂಪಿಸಲಾಗುತ್ತಿದೆ? ಅಂಥವರಿಗೆ ಪ್ರೇರಣೆ ನೀಡುವವರು ಯಾರು. ಅವರಿಗೆ ಕಾನೂನು ಮಾಹಿತಿ ನೀಡುವವರು, ಆರ್ಥಿಕ ಸಹಾಯ ಮಾಡುವವರು ಯಾರು ಎಂಬುದು ತನಿಖೆಯಾಗಬೇಕು ಎಂದು ರವಿ ತಿಳಿಸಿದರು. ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಪ್ರಮುಖರಾದ ರಾಮದಾಸ್‌ ಬಂಟ್ವಾಳ, ಮೋನಪ್ಪ ದೇವಸ್ಯ, ಪುಷ್ಪರಾಜ ಚೌಟ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next