Advertisement

ಶರಣ್‌ ಹೊಸ ಚಿತ್ರ ಗುರು ಶಿಷ್ಯರು

12:28 PM Dec 22, 2020 | Suhan S |

ನಟ ಶರಣ್‌ ತಮ್ಮ “ಲಡ್ಡು ಸಿನಿಮಾ ಹೌಸ್‌’ನಡಿ ಹೊಸ ಸಿನಿಮಾ ಮಾಡಲು ಹೊರಟಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರತಂಡ ಚಿತ್ರದ ಟೈಟಲ್‌ ಅನೌನ್ಸ್‌ ಮಾಡಿದೆ. ಅದು “ಗುರು-ಶಿಷ್ಯರು’.

Advertisement

ಹೌದು, ಇದು ಶರಣ್‌ ಅಭಿನಯದ ಹೊಸ ಚಿತ್ರದ ಶೀರ್ಷಿಕೆ. ಈ ಚಿತ್ರದ ಟೈಟಲ್‌ಕೇಳಿದ ಕೂಡಲೇ ನಿಮಗೆ ದ್ವಾರಕೀಶ್‌ ನಿರ್ಮಾಣದ ಚಿತ್ರದ ನೆನಪಾಗಬಹುದು. ದ್ವಾರಕೀಶ್‌ ನಿರ್ಮಾಣ ವಿಷ್ಣುವರ್ಧನ್‌ ನಟನೆಯಲ್ಲಿ ಬಂದ “ಗುರು ಶಿಷ್ಯರು’ ಸಿನಿಮಾ ದೊಡ್ಡ ಹಿಟ್‌ ಆಗಿತ್ತು. ಈ ಚಿತ್ರವನ್ನು ಭಾರ್ಗವ ನಿರ್ದೇಶನ ಮಾಡಿದ್ದರು. ಈಗ ಶರಣ್‌ ಅದೇ ಟೈಟಲ್‌ನಡಿ ಸಿನಿಮಾ ಮಾಡಲು ಹೊರಟಿದ್ದಾರೆ. ನಿರ್ಮಾಣದಲ್ಲಿ ಶರಣ್‌ಗೆ ತರುಣ್‌ ಸುಧೀರ್‌ ಸಾಥ್‌ ನೀಡುತ್ತಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿಗೆ ಪ್ರತಿಷ್ಠಿತ “ಲೀಜನ್ ಆಫ್ ಮೆರಿಟ್ ಪ್ರಶಸ್ತಿ” ನೀಡಿ ಗೌರವಿಸಿದ ಟ್ರಂಪ್

ಈ ಚಿತ್ರವನ್ನು ಜಡೇಶ್‌ ಹಂಪಿ ನಿರ್ದೇಶಿಸುತ್ತಿದ್ದಾರೆ. ತರುಣ್‌ ಸುಧೀರ್‌ ಈ ಚಿತ್ರದಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಆರೂರು ಸುಧಾಕರ್‌ಶೆಟ್ಟಿಯವರ ಛಾಯಾಗ್ರಹಣವಿದೆ. ಸದ್ಯಚಿತ್ರಕ್ಕೆ ಶರಣ್‌ ನಾಯಕರಾಗಿದ್ದು, ಉಳಿದಂತೆ ಇತರ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಚಿತ್ರದ ಟೈಟಲ್‌ ಲಾಂಚ್‌ ಪ್ರೋಮೋ ಹಾಗೂ ಪೋಸ್ಟರ್‌ ವೈರಲ್‌ ಆಗಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next