Advertisement

‘ಅವತಾರ್‌ ಪುರುಷ’ನ ಆಟ ಡಿ.10ರಿಂದ ಶುರು

02:53 PM Nov 12, 2021 | Team Udayavani |

ಶರಣ್‌ ನಟನೆಯ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಅವತಾರ್‌ ಪುರುಷ’. ಸಿಂಪಲ್‌ ಸುನಿ ನಿರ್ದೇಶನದ ಈ ಚಿತ್ರ ಡಿಸೆಂಬರ್‌ 10ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ತುಂಬಾ ದಿನಗಳ ನಂತರ ಸುನಿ ಹಾಗೂ ಶರಣ್‌ ಇಬ್ಬರ ಚಿತ್ರಗಳು ಬಿಡುಗಡೆಯಾ ದಂತಾಗುತ್ತದೆ.

Advertisement

“ಅವತಾರ್‌ ಪುರುಷ’ ಚಿತ್ರ ಎರಡು ಭಾಗಗಳಲ್ಲಿ ತಯಾರಾಗಿದ್ದು, ಈಗ ಮೊದಲ ಭಾಗ ಡಿ.10ಕ್ಕೆ ಬಿಡುಗಡೆ ಕಾಣುತ್ತಿದೆ. ಪುಷ್ಕರ್‌ ಈ ಚಿತ್ರದ ನಿರ್ಮಾಪಕರು. “ಅವತಾರ್‌ ಪುರುಷ’ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾವಾಗಿದ್ದು, ಶರಣ್‌ ಹಾಗೂ ಸುನಿ ಇಬ್ಬರು ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:‘ಗರುಡ ಗಮನ ವೃಷಭ ವಾಹನ’ ನ.19ಕ್ಕೆ ಬಿಡುಗಡೆ; ಹೆಚ್ಚಾಗುತ್ತಿದೆ ನಿರೀಕ್ಷೆ

ಇನ್ನು, ಈ ಚಿತ್ರದಲ್ಲಿ ಆಶಿಕಾ ರಂಗನಾಥ್‌ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಸಾಯಿಕುಮಾರ್‌, ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಫ‌ಸ್ಟ್‌ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next