Advertisement

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

12:13 AM Oct 06, 2022 | Team Udayavani |

ಮಂಗಳೂರು/ ಉಡುಪಿ:ಒಂಬತ್ತು ದಿನಗಳ ಕಾಲ ನಡೆದ ಶರನ್ನವರಾತ್ರಿ ಮಹೋತ್ಸವ ಬುಧವಾರ ವಿಜಯದಶಮಿ ಉತ್ಸವದೊಂದಿಗೆ ಸಮಾಪನಗೊಂಡಿತು.

Advertisement

ವಿಶೇಷವಾಗಿ ದೇವಿ ದೇವಾಲಯ ಗಳಲ್ಲಿ ಒಂಬತ್ತೂ ದಿನಗಳ ಕಾಲ ಚಂಡಿಕಾ ಹವನ, ಸಪ್ತಶತಿ ಪಾರಾಯಣ, ದುರ್ಗಾ ಹವನ, ದುರ್ಗಾ ನಮಸ್ಕಾರ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯವೂ ಅನ್ನದಾನ ನಡೆದವು.

ಮಂಗಳೂರು ನಗರದ ವಿವಿಧ ದೇವಸ್ಥಾನಗಳಲ್ಲಿ ಸೆ. 26ರಿಂದ ಆರಂಭಗೊಂಡ ವೈಭವದ ನವರಾತ್ರಿ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. “ಮಂಗಳೂರು ದಸರಾ’ ಎಂದೇ ಪ್ರಸಿದ್ಧಿ ಪಡೆದಿರುವ ಕುದ್ರೋಳಿ ಕ್ಷೇತ್ರದ ನವರಾತ್ರಿ ಉತ್ಸವವು ಬುಧವಾರ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನ ಗೊಂಡಿತು.

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವಿಜಯ ದಶಮಿಯಂದು ವಿದ್ಯಾರಂಭ, ತುಲಾಭಾರ ನಡೆಯಿತು. ಮಧ್ಯಾಹ್ನ ರಥಾರೋಹಣ, ರಾತ್ರಿ ರಥೋತ್ಸವ ಜರಗಿತು. ಕಟೀಲು, ಪೊಳಲಿ, ಬಪ್ಪನಾಡು ಸಹಿತ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಸಡಗರ ನಡೆದು ಬುಧವಾರ ಸಮಾಪನಗೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯ ದೇವೀ ದೇವಸ್ಥಾನಗಳಲ್ಲಿ ಕೂಡ ನವರಾತ್ರಿ ಆಚರಣೆ, ಶಾರದಾ ಪೂಜೆ ಶ್ರದ್ಧಾಭಕ್ತಿಗಳಿಂದ ನೆರವೇರಿತು.

Advertisement

ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿ ನಿಂದ ಆರಂಭಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಅದ್ದೂರಿಯಾಗಿ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.26ರಿಂದ ಅ.5ರವರೆಗೆ ಮಹಾನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು. ಉಡುಪಿ ಆಸುಪಾಸಿನ ದೇವಿ ದೇವ ಸ್ಥಾ ನ ಗ ಳಲ್ಲಿ ಮಹಾನವಮಿಯಂದು ಚಂಡಿಕಾಯಾಗ, ರಥೋತ್ಸವ, ವಿಜಯದಶಮಿಯಂದು ವಿದ್ಯಾರಂಭ ನವಾನ್ನಪ್ರಾಶನ ಜರಗಿತು.

ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಶ್ರೀಕೃ ಷ್ಣಮಠದಿಂದ ಮೆರವಣಿಗೆ ಬಂದು ಶಮೀ ವೃಕ್ಷದ ಪೂಜೆಯ ಪ್ರಸಾದವನ್ನು ಸ್ವೀಕರಿಸಿ ದರು. ಶ್ರೀಕೃಷ್ಣಮಠದಲ್ಲಿ ಕದಿರು ಕಟ್ಟುವ ಹಬ್ಬ ಆಚರಿಸಲಾಯಿತು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ಕಳದ ಕುಕ್ಕೂಂದೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿಯ ಕಡಿಯಾಳಿ, ಇಂದ್ರಾಳಿ, ಬೈಲೂರು, ಅಂಬಲಪಾಡಿ, ಪುತ್ತೂರು, ಕನ್ನರ್ಪಾಡಿ ಸಹಿತ ದೇವಿಯ ದೇವಸ್ಥಾನಗಳ ವೈಭವದಿಂದ ನವರಾತ್ರಿಯ ಆಚರಣೆ ನಡೆಯಿತು.

ರಥಬೀದಿ; ಇಂದು ಶೋಭಾಯಾತ್ರೆ
ರಥಬೀದಿಯ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಅ. 6ರಂದು ಸಮಾಪನಗೊಳ್ಳಲಿದೆ. ರಾತ್ರಿ 10 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್‌ ವಿಸರ್ಜನಾ ಶೋಭಾಯಾತ್ರೆಯು ನಗರದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next