Advertisement

ಕಲಬುರಗಿಯಲ್ಲಿ ರಾಜ್ಯ ಮಟ್ಟದ 15ನೇ ಶರಣತತ್ವ ಕಮ್ಮಟ

12:11 PM Nov 08, 2022 | Team Udayavani |

ಕಲಬುರಗಿ: ಲಿಂ. ಶರಣೆ ಪುಟ್ಟಮ್ಮ ಮತ್ತು ಲಿಂ. ಶರಣ ಬಸವರಾಜಪ್ಪ ಅಜ್ಜಂದಿರ ಸೇವಾ ಟ್ರಸ್ಟ್ (ರಿ) ಮತ್ತು ಬಸವ ಬಳಗ ದಾವಣೆಗೆರೆ ಹಾಗೂ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಕಲಬುರಗಿಯ ಎಲ್ಲ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನ.10ರಿಂದ 13ರವರೆಗೆ ಮೂರು ದಿನಗಳ ಕಾಲ ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಮೂರು ದಿನಗಳ ಕಾಲ 15ನೇ ಶರಣತತ್ವ ಕಮ್ಮಟ ಜರುಗಲಿದೆ ಎಂದು ಸಂಚಾಲಕ ಡಾ.ಕೆ.ಎಸ್.ವಾಲಿ ತಿಳಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭಾವ ಮತ್ತು ಪ್ರಾತ್ಯಕ್ಷಿಕೆ ಇರುವ ಈ ಕಮ್ಮಟದ ಸದುಪಯೋಗ ಪಡೆಯಲು ಕೋರಿದ ಅವರು, ದಿ. 10ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ.

ದಾವಣಗೆರೆ ಬಸವ ಬಳಗದ ಶತಾಯುಷಿ ವಿ.ಸಿದ್ಧರಾಮಣ್ಣನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಲಬುರಗಿ ಬಸವ ಕೇಂದ್ರದ ಅಧ್ಯಕ್ಷ ಶಿವಶರಣಪ್ಪ ಕಲ್ಬುರ್ಗಿ ಕಮ್ಮಟ ಉದ್ಘಾಟಿಸಲಿದ್ದಾರೆ ಎಂದರು. ದಾವಣಗೆರೆ ಬಸವ ಬಳಗದ ಶರಣ ಹುಚ್ಚಪ್ಪ ಮಾಸ್ತರ ಅಧ್ಯಕ್ಷತೆ ವಹಿಸುವರು ವಚನ ವಿದ್ವಾಂಸ ಡಾ. ವೀರಣ್ಣ ದಂಡೆಯವರು “ಕಲ್ಯಾಣದ ಶರಣರು’ ವಿಷಯ ಕುರಿತು ಅನುಭಾವ ನೀಡಲಿದ್ದಾರೆ.

ಕಲಬುರಗಿ ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ, ಕೇಂದ್ರ ಬಸವ ಸಮಿತಿಯ ಶರಣ ಅರವಿಂದ ಜತ್ತಿ, ಕಲಬುರಗಿ ವಿಟಿಯು ಪ್ರಾದೇಶಿಕ ನಿರ್ದೇಶಕ ಬಸವರಾಜ ಗಾದಗ, ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಶರಣ ಸಾಹಿತಿ ಡಾ. ವಿಶ್ವಾರಾಧ್ಯ ಸತ್ಯಂಪೇಟೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಮೂರುದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಶಿವಯೋಗ (ಇಷ್ಟಲಿಂಗ ಯೋಗ) ಪ್ರಾತ್ಯಕ್ಷಿಕ, ಅನುಭಾವ ಹಾಗೂ ಪಥ ಸಂಚಲನ ಕಾರ್ಯಕ್ರಮ ಜರುಗಲಿವೆ. ಇದೇವೇಳೆ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಪ್ರಸಾದ, ಪಂಚಾಚಾರಗಳು, ಷಟಸ್ಥಲಗಳು ವಿಷಯ ಕುರಿತು ಅನುಭಾವ ಹಾಗೂ ಸಂವಾದ ಕಾರ್ಯಕ್ರಮಗಳು ಜರುಗಲಿವೆ, ಬಸವಕಿರಣ, ಪ್ರೊ. ವೈಜನಾಥ ಕೋಳಾರ, ಮಹಾಲಿಂಗ ಸ್ವಾಮಿಗಳು, ಬಸವರಾಜ ಭಾವಿ, ಮಹಾಂತೇಶ ಕುಂಬಾರ, ಭುವನೇಶ್ವರಿ ತಾಯಿ, ಭಾರತಿ ಕೆಂಪಮ್ಮ, ಪಿ.ರುದ್ರಪ್ಪ, ಶಿವಲೀಲಾ ಚಟ್ನಳ್ಳಿ, ಸಿದ್ಧರಾಮೇಶ್ವರ ಶರಣರು ಬೆಲ್ದಾಳ ಮುಂತಾದವರು ನಡೆಸಿಕೊಡಲಿದ್ದಾರೆ ಎಂದರು.

Advertisement

ದಿ. 11ರಂದು ಹಾಗೂ 12ರಂದು ಸಂಜೆ 6 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮಗಳು ಜರುಗಲಿದ್ದು, ನಿತ್ಯ ಬದುಕಿಗೆ ಬಸವತತ್ವ, ವಚನಗಳಲ್ಲಿ ನಿರ್ವಹಣಾ ಶಾಸ್ತ್ರ, ವಚನಗಳಲ್ಲಿ ಒತ್ತಡ ನಿರ್ವಹಣೆ ವಿಷಯ ಕುರಿತು ಶಶಿಧರ ಕರವೀರ ಶೆಟ್ಟರ್, ಡಾ. ಗಣಪತಿ ಸಿನ್ನೂರ, ಭುಜಬಲಿ ಬೋಗಾರ ಮತ್ತಿತರರು ಅನುಭಾವ ನೀಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next