Advertisement
ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ-ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ಪ್ರತಿಭೆಯ ಹೆಸರು ಶರಣಮ್ಮ ಗುರುಬಸಪ್ಪ ಪಾಲಕೆ. 22 ವರ್ಷದ ಶರಣಮ್ಮಗೆ ಚಿಕ್ಕವರಾಗಿದ್ದಾಗಿನಿಂದಲೂ ಮಾತು ಬರುವುದಿಲ್ಲ, ಕಿವಿಯೂ ಕೇಳಿಸುವುದಿಲ್ಲ. ಹಾಗಂತ ಇವರಲ್ಲಿ ಪ್ರತಿಭೆ ಹಾಗೂ ಚೈತನ್ಯಕ್ಕೇನೂ ಕೊರತೆ ಇಲ್ಲ. ಮೌನದ ಕೊರಗಿನ ಕೀಳರಿಮೆ ಕಿತ್ತೆಸೆದಿರುವ ಇವರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಹೊಂಗನಸು ಕಟ್ಟಿಕೊಂಡಿದ್ದಾರೆ. ಕೇವಲ ಕನಸು ಕಟ್ಟಿಕೊಂಡು ಕುಳಿತುಕೊಳ್ಳದೇ ತನ್ನ ನಿರ್ಧಿಷ್ಟ ಗುರಿ ಸಾಧನೆಗೆ ನಿರಂತರ ಕಲಿಯುವಿಕೆಯ ಮೊರೆ ಹೋಗಿದ್ದಾರೆ.
ವಿಶೇಷಚೇತನೆಯಾದ ಶರಣಮ್ಮ ಸಾಮಾನ್ಯರೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ. ಶರಣಮ್ಮ ಓದಿನಲ್ಲಿ ತಕ್ಕ ಸಾಧನೆ ಮಾಡಿದ್ದಾರೆ. ಆದರೆ ಕ್ರೀಡೆಯಲ್ಲಿ ಭರ್ಜರಿ ಪದಕಗಳ ಬೇಟೆಯಾಡಿ ರಾಣಿ ಎನಿಕೊಂಡಿದ್ದಾರೆ. ಬಿಎ 2ನೇ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿರುವ ಶರಣಮ್ಮ ವಿವಿಧ ಕ್ರೀಡೆಯಲ್ಲಿ ತನ್ನ ಪ್ರತಿಭೆ ತೋರುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹೈಸ್ಕೂಲ್ ಶಿಕ್ಷಣದ ಬಳಿಕ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಹಿರೇಮಠ ಅವರಿಂದ ಅಥ್ಲೆಟಿಕ್ಸ್ ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆದ ಶರಣಮ್ಮ, ಕೆಲವೇ ವರ್ಷಗಳಲ್ಲಿ ತನ್ನಲ್ಲಿರುವ ಕ್ರೀಡಾ ಪ್ರತಿಭೆಯಿಂದ ಹಲವಾರು ಪದಕಗಳ ಗೆದ್ದರು.
Related Articles
Advertisement
ಕೇವಲ ಈ ಎರಡು ಕ್ರೀಡೆ ಮಾತ್ರವಲ್ಲದೇ ಡಿಸ್ಕಸ್ ಎಸೆತದಲ್ಲೂ ಪ್ರವೀಣೆ ಎನಿಸಿಕೊಂಡಿರುವ ಶರಣಮ್ಮ ಕ್ರಿಕೆಟ್‌ನಲ್ಲೂ ಛಾಪು ಮೂಡಿಸಿದ್ದಾರೆ. 2018 ರಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ವಿಜೇತ ತಂಡದ ಆಟಗಾರ್ತಿಯಾಗಿದ್ದರು. ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದ ಹಾಕಿ ತಂಡದಲ್ಲಿ ಈಕೆಯೇ ಗೋಲ್ ಕೀಪರ್ ಎಂಬುದು ಗಮನೀಯ. ಚದುರಂಗ ಕ್ರೀಡೆಯಲ್ಲೂ ಕೈಚಳಕ ತೋರಬಲ್ಲ ಸಾಮರ್ಥ್ಯ ಹೊಂದಿರುವ ಶರಣಮ್ಮ, ಚಿತ್ರ ಬಿಡಿಸುವ ಕಲೆಯನ್ನೂ ಮೈಗೂಡಿಸಿಕೊಂಡಿದ್ದಾರೆ.
ತಾಯಿಗೆ ಮಗಳ ಭವಿಷ್ಯದ ಚಿಂತೆತಾಯಿ ಸಂಗಮ್ಮಗೆ ಮಗಳ ಭವಿಷ್ಯದ ಬಗ್ಗೆ ಸಹಜ ಚಿಂತೆ ಕಾಡುತ್ತಿದ್ದರೂ, ಆಕೆಗೆ ಎಂದೂ ತನ್ನಲ್ಲಿರುವ ನ್ಯೂನ್ಯತೆ ಕೊರತೆ ಕಾಡದಂತೆ ಸದಾ ಎಚ್ಚರವಹಿಸಿದ್ದಾರೆ. ತಂದೆ ಗುರುಬಸಪ್ಪ ಅವರಿಗೆ ಮಗಳ ಸಾಧನೆಯ ವಿಷಯವಾಗಿ ಅಪಾರ ಖುಷಿ ಇದೆ. ಸಾಮಾನ್ಯ ವಿದ್ಯಾರ್ಥಿನಿಯರಿಗಿಂತ ಶರಣಮ್ಮ ತನ್ನಲ್ಲಿರುವ ನ್ಯೂನ್ಯತೆಯ ಕೀಳರಿಮೆ ಬಿಟ್ಟು ಸಕ್ರೀಯವಾಗಿ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ಪರಿ ಇತರರಿಗೆ ಮಾದರಿ. ಆಕೆಯಿಂದಾಗಿ ನಮ್ಮ ವಿದ್ಯಾಲಯಕ್ಕೆ ಕೀರ್ತಿ ಹೆಚ್ಚುತ್ತಿದ್ದು, ದೇಶಕ್ಕೆ ಭವಿಷ್ಯದ ಉತ್ತಮ ಕ್ರೀಡಾ ಆಸ್ತಿ ಆಗುವ ಎಲ್ಲ ಅರ್ಹತೆ, ಶಕ್ತಿ-ಸಾಮರ್ಥ್ಯ ಆಕೆಯಲ್ಲಿದೆ.
ಎಸ್.ಜೆ.ಪವಾರ, ಪ್ರಾಚಾರ್ಯರು ಎಸ್‌ಬಿಎಸ್ ಕಲಾ-ವಾಣಿಜ್ಯ ಮಹಿಳಾ ಪದವಿ ಕಾಲೇಜು, ವಿಜಯಪುರ ಜಿ.ಎಸ್.ಕಮತರ