Advertisement

ವಚನ ಸಾಹಿತ್ಯಕ್ಕಿದೆ ವಿಶ್ವ ಮಾರ್ಗದರ್ಶನ ಶಕ್ತಿ

03:48 PM Oct 28, 2020 | Suhan S |

ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ಶರಣರು ತಮ್ಮ ಅನುಭವದ ಮೂಲಕ ರಚಿಸಿದ ವಚನ ಸಾಹಿತ್ಯಕ್ಕೆ ಇಡೀ ವಿಶ್ವಕ್ಕೆ ಮಾರ್ಗದರ್ಶನಮಾಡುವ ಶಕ್ತಿ ಇದೆ ಎಂದು ಅನುಭವ ಮಂಟಪದ ಅಧ್ಯಕ್ಷ ಶ್ರೀ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ಅಂತಾರಾಷ್ಟ್ರೀಯ ಧರ್ಮ ಕೇಂದ್ರದ ವತಿಯಿಂದ ನಗರದ ಹರಳಯ್ಯ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ 41ನೇ ಲಿಂಗವಂತ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಲ್ಯಾಣ ಕ್ರಾಂತಿ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವರ್ಗ-ವರ್ಣ, ಜಾತಿ, ಮೇಲು-ಕೀಳು ಎಲ್ಲವನ್ನೂ ಮೀರಿಸುವ ಮಾನವೀಯ ಸಾಹಿತ್ಯವಾಗಿದೆ ಎಂದರು. ಜಾತೀಯತೆ ನಿರ್ಮೂಲನೆಗೆ ಶರಣರು ದೊಡ್ಡ ಹೋರಾಟ ಮಾಡಿ ಯಶಸ್ಸು ಸಾಧಿ ಸಿದ್ದಾರೆ. ಅವರ ಆಶಯಗಳು, ತ್ಯಾಗ-ಬಲಿದಾನ ಹುಸಿ ಹೋಗದಂತೆ ಅನ್ಯ ಆಚರಣೆ ಬಿಟ್ಟು ಬಸವತತ್ವದ ಆಚರಣೆ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಮಹಾರಾಷ್ಟ್ರದ ಜಾಲನಾ ಮೆಡಿಕಲ್‌ ಕಾಲೇಜಿನ ಡಾ| ಅಮರನಾಥ ಸೋಲಪುರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿನ ಎಲ್ಲ ಕ್ರಾಂತಿಗಳತಾಯಿ ಬೇರು ಕಲ್ಯಾಣ ಕ್ರಾಂತಿ. ಎಲ್ಲ ಕುಲ, ಜಾತಿ,ಧರ್ಮಗಳು ಸೇರಿಕೊಂಡು ಭೇದ-ಭಾವವಿಲ್ಲದೇಅಭಿವ್ಯಕ್ತಪಡಿಸಲು ಸ್ವಾತಂತ್ರÂ ಸಿಕ್ಕಿತು. ಬಸವಣ್ಣನವರ ನೇತೃತ್ವದಲ್ಲಿ ಎಲ್ಲರೂ ಕೂಡಿಕೊಂಡು ಬಹುದೊಡ್ಡ ಕ್ರಾಂತಿ ಮಾಡಿದ್ದರು ಎಂದರು.

ಹರಳಯ್ಯ ಗವಿಯ ಶ್ರೀ ಡಾ| ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಶರಣರ ತತ್ವಗಳು ವಿಶ್ವ ಮಾನವ ತತ್ವಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ ಜನಾಂಗ ನಿರ್ಮಾಣವಾಗಬೇಕು. ಆಯುಧಪೂಜೆಯಾಗದೇ ಇಷ್ಟಲಿಂಗ ಯೋಗ ಮಾಡಬೇಕು ಎಂದರು. ಬಿಡಿಪಿಸಿ ಉಪಾಧ್ಯಕ್ಷ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಿದರು.

ಈ ವೇಳೆ ಬಸವರಾಜ ಬಾಲಿಕಿಲೆ, ಗುರುಪಾದಪ್ಪ ಪಾಟೀಲ, ಶ್ರೀಕಾಂತ ಮೋದಿ, ಸಾರಿಗೆ ಅಧಿ ಕಾರಿ ಸಂಜೀವಕುಮಾರ ವಾಡೇಕರ್‌ ಇತರರು ಇದ್ದರು. ರವೀಂದ್ರ ಕೊಳಕೂರ ಸ್ವಾಗತಿಸಿದರು. ಪ್ರೊ| ವಿಜಯಲಕೀÒ$¾ಗಡ್ಡೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next