Advertisement
ನಗರದ ಬಸವಕೇಂದ್ರ ಹೊಸಮಠದಲ್ಲಿಲಿಂ. ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಶ್ರೀಗಳು ಹಾಗೂ ಅಥಣಿಮುರುಘೇಂದ್ರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಬಸವಣ್ಣನವರು ಸಮಾಜಕ್ಕೆ ನಿಸರ್ಗ ಧರ್ಮ ಕೊಡುಗೆಯಾಗಿ ನೀಡಿದ್ದು, ಕಾಯಕ, ಪ್ರದಾಸ, ದಾಸೋಹ ಎಂಬ ಮೂರು ಅಂಶಗಳ ಮೇಲೆ ನಿಸರ್ಗ ತತ್ವ ನಿಂತಿದೆ. ಕಾಯಕ ಎಂಬುದು ಸ್ವಾವಲಂಬಿತನವಾಗಿದ್ದು, ಕಾಯಕಕ್ಕೂ ಕೆಲಸಕ್ಕೂ ವ್ಯತ್ಯಾಸವಿದೆ. ಕಾಯಕಕ್ಕೆ ಜಗತ್ತಿನಲ್ಲಿ ಯಾವ ಭಾಷೆಯಲ್ಲೂ ಸಮಾನ ಪದವಿಲ್ಲ. ಪ್ರಸಾದ ಎಂದರೆಸದ್ಬಳಕೆ ಎಂಬ ಅರ್ಥವಿದೆ. ದಾಸೋಹ ಎಂದರೆಯೋಗ್ಯ ಸಾಮಾಜಿಕ ವಿತರಣೆ ಎಂದರ್ಥವಿದೆ ಎಂದರು.
ಸವಣೂರಿನ ದೊಡ್ಡಹುಣಸೇಕಲ್ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿಸಾಹಿತ್ಯ ಚಿಂತಕರಾದ ಪ್ರೊ|ಮಲ್ಲೇಪುರಂ ವೆಂಕಟೇಶ ಅವರಿಗೆ ಡಾ| ಶಿಮುಶ ಪ್ರಶಸ್ತಿ ನೀಡಿಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಧಾರವಾಡ ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಚಂದ್ರಶೇಖರ ಶಿಸನಳ್ಳಿ, ನಾಗೇಂದ್ರ ಕಟಕೋಳ, ಪರಮೇಶ್ವರಪ್ಪ ಮೇಗಳಮನಿ, ರಾಜೇಂದ್ರ ಸಜ್ಜನರ ಇತರರು ಇದ್ದರು.
ಜೀವನದಲ್ಲಿ ನೆಮ್ಮದಿ, ಶಾಂತಿ ಸಂಪಾದಿಸಲು ಒಂದಿಷ್ಟು ನಿಸ್ವಾರ್ಥ ಪಾಲಿಸಬೇಕು. ಬಸವಣ್ಣನವರದ್ದುನಿಸ್ವಾರ್ಥದ ಇತಿಹಾಸವಾಗಿದ್ದು, ನೈಘಂಟಿನಸಿದ್ಧಬಸವ ಶ್ರೀಗಳು, ಅಥಣಿ ಮುರುಘೇಂದ್ರ ಮಹಾಶಿವಯೋಗಳು ಸೇರಿದಂತೆ ಬಸವಾದಿ ಶರಣರು ಜೀವನದುದ್ದಕ್ಕೂ ಶರಣ ಸಂಸ್ಕೃತಿ ಪಾಲಿಸುವ ಮೂಲಕ ನಿಸ್ವಾರ್ಥದಿಂದ ಜೀವನ ನಡೆಸಿ ಆದರ್ಶರಾಗಿದ್ದಾರೆ. -ಡಾ| ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠ