Advertisement

ನಾಳೆಯಿಂದ ಶರಣ ಸಂಸ್ಕೃತಿ ಉತ್ಸವ

11:50 AM Dec 27, 2018 | Harsha Rao |

ಬೆಂಗಳೂರು: ಬಸವ ಕೇಂದ್ರದ ವತಿಯಿಂದ ಡಿ.28, 29 ಹಾಗೂ 30ರಂದು ವಿಜಯನಗರದ ಬಸವೇಶ್ವರ ಸುಜ್ಞಾನ
ಮಂಟಪದಲ್ಲಿ “ಶರಣ ಸಂಸ್ಕೃತಿ ಉತ್ಸವ’ ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಜನರಲ್ಲಿ ಸಮಾನತೆ ಸಾರುವ ಹಾಗೂ ಬಸವಾದಿ ಶರಣರ ಅನುಭವ ಮಂಟಪದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳುತ್ತಿದ್ದೇವೆ.
ಬೆಂಗಳೂರಿನ ಒತ್ತಡದ ಜೀವನದಿಂದ ಮಾನಸಿಕವಾಗಿ ಹೊರಬರಲು ಸಂಜೆ ವೇಳೆ ವಿಶಿಷ್ಟ ವಿಷಯಗಳ ಚಿಂತನಾಗೋಷ್ಠಿಗಳು ಈ ಉತ್ಸವದಲ್ಲಿ ನಡೆಯಲಿವೆ ಎಂದು ಹೇಳಿದರು.

Advertisement

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆಯುವ ಉತ್ಸವವನ್ನು
ಡಿ.28ರಂದು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ
ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಎಚ್‌.ಡಿ.ರೇವಣ್ಣ, ಶಾಸಕ ವಿ.ಸೋಮಣ್ಣ ಹಾಗೂ ಮೇಯರ್‌
ಗಂಗಾಬಿಕೆ ಭಾಗವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಸ್‌.ಜಿ.ಸಿದ್ದರಾಮಯ್ಯ ವಿಷಯಾವ ಲೋಕನ ಮಾಡುವರು. ನಂತರ ಹಾಸ್ಯ ಕಲಾವಿದರಾದ ನರಸಿಂಹ ಜೋಷಿ, ಜೀವನ್‌ ಸಾಬ್‌ ಅವರಿಂದ ಹಾಸ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಡಿ.29ರಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌ ಆಗಮಿಸಲಿ¨ªಾರೆ. ಬದುಕು ಮತ್ತು ಧನ್ಯತೆಯ ಮಾರ್ಗ ವಿಚಾರದ ಕುರಿತು ಚಿಂತನಗೋಷ್ಠಿ, ಸಾಂಸ್ಕೃತಿಕ ಸಂಭ್ರಮ, ನೆರಳು ಬೆಳಕಿನ ಆಟ, ವಚನ ನೃತ್ಯ ಏರ್ಪಡಿಸಲಾಗಿದೆ.

ಕೊನೆಯ ದಿನವಾದ ಡಿ.30ರಂದು ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು,
ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಲಿ¨ªಾರೆ. ಯುವ ಜನಾಂಗ ಮತ್ತು ಬಹುಮುಖೀ
ಕೌಶಲಾಭಿವೃದ್ಧಿ ಬಗ್ಗೆ ಚಿಂತನಗೋಷ್ಠಿ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದಲ್ಲಿ ನಿತ್ಯ ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗ ನಡೆಯಲಿದೆ ಎಂದು ಮಾಹಿತಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next