Advertisement

ಸರಳವಾಗಿ ನೆರವೇರಿದ ಶರಣಬಸವೇಶ್ವರರ ರಥೋತ್ಸವ

02:57 PM Apr 02, 2021 | Team Udayavani |

ಕಲಬುರಗಿ: ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವವು ಶುಕ್ರವಾರ ಮಧ್ಯಾಹ್ನ ಅತ್ಯಂತ ಸರಳ ರೀತಿಯಲ್ಲಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ಸಾಂಕೇತಿಕವಾಗಿ ಜಾತ್ರೆ ಆಚರಿಸಲಾಯಿತು.

Advertisement

ಪ್ರತಿ ವರ್ಷವೂ ಸಂಜೆ ವೇಳೆ ಸಾವಿರಾರು ಜನರೊಂದಿಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಆದರೆ, ಕೊರೊನಾ ಹಾವಳಿಯಿಂದಾಗಿ ಕಳೆದ ವರ್ಷದಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.‌

ಕಳೆದ ಬಾರಿ ರಥೋತ್ಸವದ ಮುನ್ನವೇ ಕೋವಿಡ್ ನಿಂದ ಮೊದಲ ಸಾವು ಸಂಭವಿಸಿದ ವರದಿಯಾಗಿತ್ತು. ಹೀಗಾಗಿ ಎಲ್ಲ ಸಿದ್ಧತೆಗಳ ನಡುವೆಯೂ ನಿಗದಿತ ಸಮಯಕ್ಕಿಂತ ಮುನ್ನವೇ ರಥೋತ್ಸವ ನೆರವೇರಿತ್ತು.

ಇದನ್ನೂ ಓದಿ:ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡಮಟ್ಟದ ಸ್ಫೋಟವಾಗಲಿದೆ: ಮತ್ತೆ ಕಿಡಿಕಾರಿದ ಯತ್ನಾಳ್

ಈ ವರ್ಷ ಕೋವಿಡ್ ಎರಡನೇ ಅಲೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆ, ಉರುಸ್, ಮೆರವಣಿಗೆಗಳನ್ನು ನಿಷೇಧಿಸಿದೆ. ಅದರಂತೆ ‌ಸಾಂಕೇತಿಕವಾಗಿ ಶರಣಬಸವೇಶ್ವರರ ಥರ ಎಳೆಯುವ ಮೂಲಕ ಉತ್ಸವ ನಡೆಯಿತು. ಪೀಠಾಧಿಪತಿ ಡಾ.ಶರಣಬಸವಪ್ಪ  ಅವರು ಶರಣಬಸವೇಶ್ವರರು ಬಳಸುತ್ತಿದ್ದ ಪರುಷ ಬಟ್ಟಲನ್ನು ಭಕ್ತರಿಗೆ ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Advertisement

ಇದಕ್ಕೂ ಮುನ್ನ ಬೆಳಗ್ಗೆ ದೆವಸ್ಥಾನದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಸಾಂಗವಾಗಿ ನೆರವೇರಿದವು. ಭಕ್ತರು ಜಾತ್ರೆ ಮೈದಾನದಲ್ಲಿ ಗುಂಪುಗೂಡದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮೂರೂ ದಿಕ್ಕುಗಳಲ್ಲಿ ಬ್ಯಾರಿಕೇಡ್ ಇಟ್ಟು ಪ್ರವೇಶ ನಿರ್ಬಂಧಿಸಿದರು.

ಇದನ್ನೂ ಓದಿ: ಕಳ್ಳತನದ ವೇಳೆ ಹೃದಯಾಘಾತ : ಕದ್ದ ಹಣಕ್ಕಿಂತ ಹೆಚ್ಚು ಆಸ್ಪತ್ರೆ ಬಿಲ್ ಕಟ್ಟಿದ ಚೋರರು  

ಈ ಬಾರಿ ದೇವಸ್ಥಾನದ ಆವರಣ, ಮುಖ್ಯ ರಸ್ತೆ, ಜಾತ್ರೆ ಮೈದಾನದಲ್ಲಿ ಯಾವುದೇ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಿಲ್ಲ. ಇದರಿಂದ ಸುತ್ತಲಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಗುರುವಾರ ನಡೆದ ಉಚ್ಛಾಯ ರಥೋತ್ಸವವನ್ನೂ ಸರಳವಾಗಿ ಆಚರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next