Advertisement

ಹೊಸ ಅವತಾರದಲ್ಲಿ ಶರಣ್‌ ಅಖಾಡಕ್ಕೆ

03:27 PM Nov 23, 2021 | Team Udayavani |

ನಟ ಶರಣ್‌ ಅಭಿನಯದ ಹೊಸ ಚಿತ್ರವೊಂದು ಬಿಡುಗಡೆಗೆ ರೆಡಿಯಾಗಿದೆ. ಅದು “ಅವತಾರ್‌ ಪುರುಷ’. 2019ರಲ್ಲಿ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರ ಬಿಡುಗಡೆ ಯಾದ ನಂತರ ಶರಣ್‌ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಈಗ “ಅವತಾರ್‌ ಪುರುಷ’ ಬಿಡುಗಡೆಗೆ ಬಂದಿದೆ.

Advertisement

ಚಿತ್ರ ಡಿಸೆಂಬರ್‌ 10ರಂದು ಬಿಡುಗಡೆಯಾಗುತ್ತಿದೆ. ಇದು ಔಟ್‌ಅಂಡ್‌ ಔಟ್‌ ಕಾಮಿಡಿ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸುನಿ ಈ ಚಿತ್ರದ ನಿರ್ದೇಶಕರು. ಸಹಜವಾಗಿಯೇ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌, ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಯಿ ಕುಮಾರ್‌, ಆಶುತೋಷ್‌ ರಾಣಾ, ಸುಧಾರಾಣಿ ಮುಂತಾದ ಕಲಾವಿದರ ಬಳಗ ಈ ಚಿತ್ರದಲ್ಲಿದೆ. ಈ ಚಿತ್ರ ಎರಡು ಪಾರ್ಟ್‌ಗಳಲ್ಲಿ ಮೂಡಿಬಂದಿದೆ. ಮೊದಲ ಪಾರ್ಟ್‌ ಬಿಡುಗಡೆಯಾಗಿ 101ನೇ ದಿನಕ್ಕೆ ಎರಡನೇ ಪಾರ್ಟ್‌ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ. ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡುವ ನಟ ಶರಣ್‌, “ಇಲ್ಲಿಯವರೆಗೆ ನೀವು ನೋಡಿರದ ಹೊಸ ಶರಣ್‌ನನ್ನು ಈ ಚಿತ್ರದಲ್ಲಿ ನೋಡುತ್ತೀರಿ.

ಇದನ್ನೂ ಓದಿ:- ಮನೆಗೆ ಹೋಗಿ ಕೋವಿಡ್‌ ಲಸಿಕೆ ಹಾಕಲು ತಾಕೀತು

Advertisement

ನನ್ನ ಹಿಂದಿನ ಚಿತ್ರಗಳಂತೆ ಇದು ಕೂಡ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಪುಷ್ಕರ್‌ ಸ್ಟೈಲ್‌, ಶರಣ್‌ ಮ್ಯಾನರಿಸಂ, ಸುನಿ ಫ್ಲೇವರ್‌ ಕಾಣಬಹುದು. ಚಿತ್ರದಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅದೇನು ಅಂತ ಈಗಲೇ ಹೇಳಿದ್ರೆ ಅದರ ಸ್ವಾರಸ್ಯ ಕಡಿಮೆಯಾಗಬಹುದು. ಹಾಗಾಗಿ ಆ ಗುಟ್ಟು ಮಾತ್ರ ಬಿಟ್ಟು ಕೊಡಲಾರೆ.

ಒಟ್ಟಾರೆ ಇದರಲ್ಲಿ ಕಾಮಿಡಿ, ರೊಮ್ಯಾನ್ಸ್‌ ಸೇರಿದಂತೆ ಮನರಂಜಿಸಲು ಬೇಕಾದ ಅಂಶಗಳಿಗಂತೂ ಕೊರತೆ ಇಲ್ಲ. ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಇದು ಭಿನ್ನವಾದ ಚಿತ್ರ. ನೋಡುಗರಿಗೂ ಈ ಕಾನ್ಸೆಪ್ಟ್ ಇಷ್ಟವಾಗುವುದೆಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಶರಣ್‌. ನಾಯಕಿ ಆಶಿಕಾ, ವಿಜಯ್‌ ಚೆಂಡೂರು ಸಿನಿಮಾ ಬಗೆಗಿನ ತಮ್ಮ ಅನುಭವ ಹಂಚಿಕೊಂಡರು. ಇನ್ನು, ನಿರ್ದೇಶಕ ಸುನಿ ಕೂಡಾ ನಿರ್ಮಾಪಕ ಪುಷ್ಕರ್‌ ಅವರ ಸಿನಿಮಾ ಪ್ರೀತಿ, ಕಾಂಪ್ರಮೈಸ್‌ ಆಗದ ಅವರ ಗುಣದ ಬಗ್ಗೆ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next