Advertisement
ಶಾರದಾಂಬೆಯೆಂದರೆ ಜ್ಞಾನ, ಸಂಗೀತ, ಕಾವ್ಯ, ಮಾತು ಮೊದಲಾದ ಬೌದ್ಧಿಕ ವಿಚಾರಗಳನ್ನು ಪೋಷಿಸುವ ದೇವತೆ. ಆದ್ದರಿಂದ ತೊಡೆಯ ಮೇಲೆ ವೀಣೆಯನ್ನಿಟ್ಟುಕೊಂಡಿರುವ ಶಾರದಾಂಬೆಯ ಮೂರ್ತಿಯನ್ನೋ, ಚಿತ್ರವನ್ನೋ ಶಾರದಾಪೂಜೆಯ ದಿನದಂದು ಪೂಜಿಸಲಾಗುತ್ತದೆ.
Related Articles
Advertisement
ಪ್ರಕೃತಿಯಲ್ಲಿನ ಎÇÉಾ ವಸ್ತುಗಳನ್ನೂ ದೇವರಂತೆ ಕಾಣುವುದು ಭಾರತೀಯಸಂಸ್ಕೃತಿ. ನವರಾತ್ರಿಯ ಸಂದರ್ಭದಲ್ಲಿ ಆಯುಧಪೂಜೆಯನ್ನು ನಡೆಸಿ, ಯಂತ್ರಾದಿಗಳನ್ನು ಪೂಜಿಸುವಂತೆ ಶಾರದಾಪೂಜೆಯ ಸಮಯದಲ್ಲಿ ಪುಸ್ತಕಗಳನ್ನು ಇಟ್ಟು ಪೂಜಿಸಲಾಗುತ್ತದೆ. ಸಂಗೀತಶಾಲೆಗಳಲ್ಲಿ ಸಂಗೀತ ವಾದ್ಯಗಳ ಪೂಜೆಯನ್ನೂ ನಡೆಸಲಾಗುತ್ತದೆ. ಮೂಲಾ ನಕ್ಷತ್ರದಿಂದ ಆರಂಭಿಸಿ ಶ್ರವಣಾ ನಕ್ಷತ್ರದ ತನಕ ಮೂರು ಅಥವಾ ನಾಲ್ಕು ದಿನಗಳವರೆಗೆ ಪುಸ್ತಕಗಳನ್ನು ಪೂಜಿಸುವ ಸಂಪ್ರದಾಯವಿದೆ. ಭಗವದ್ಗೀತೆ, ವೇದ ಮುಂತಾದ ಪವಿತ್ರ ಗ್ರಂಥಗಳೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮೊದಲಾದ ಆಧುನಿಕ ವಿಷಯಗಳ ಪುಸ್ತಕಗಳನ್ನೂ ಪೂಜೆಗಿಟ್ಟು ಮೂರು ದಿನಗಳ ಕಾಲ ಷೋಡಶೋಪಚಾರ ಪೂಜೆಯನ್ನು ನಡೆಸುವ ಪರಂಪರೆಯೂ ಬೆಳೆದು ಬಂದಿದೆ. ಪುಸ್ತಕಗಳಿಗೆ ಪೂಜೆಯನ್ನು ನಡೆಸುವಾಗ ಗಂಧ-ಅರಸಿನ-ಕುಂಕುಮ ಮೊದಲಾದುವುಗಳನ್ನು ಅರ್ಪಿಸುವುದರಿಂದ ಪುಸ್ತಕಕ್ಕೆ ಹಾನಿಯಾಗದಂತೆ ಪುಸ್ತಕ ಪೂಜೆಯ ನಿಮಿತ್ತವಾಗಿಯೇ ವಿಶೇಷವಾಗಿ ನಿರ್ಮಿಸಿದಂತಹ ಮರದ ಪೆಟ್ಟಿಗೆಗಳನ್ನು ಅನೇಕ ಮನೆಗಳಲ್ಲಿ ನೋಡಬಹುದು.
ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸವನ್ನೂ ನವರಾತ್ರಿಯ ಸುಸಂದರ್ಭದÇÉೇ ಮಾಡಿಸಲಾಗುತ್ತದೆ. ವಿಜಯದಶಮಿಯ ದಿನದಂದು ಶಾರದಾಂಬೆಯ ಸನ್ನಿಧಿಯಲ್ಲಿ ಓಂ ಶ್ರೀ ಗಣೇಶಾಯ ನಮಃ ಮೊದಲಾದ ಮಂಗಳಕರ ಪದಗಳನ್ನು ಬರೆಸಿ ಬರವಣಿಗೆಯನ್ನು ಆರಂಭಿಸುವುದು ಹಳೆಯ ಕಾಲ ದಿಂದಲೂ ನಡೆದುಕೊಂಡು ಬಂದಿದೆ.
ದಕ್ಷಿಣ ಭಾರತದಲ್ಲಿ ನವರಾತ್ರಿಯ ಕಾಲದಲ್ಲಿ ಶಾರದಾ ಪೂಜೆಯು ಪ್ರಚಲಿತದಲ್ಲಿದ್ದರೆ ಉತ್ತರಭಾರತ, ಹಾಗೂ ನೇಪಾಲದಲ್ಲಿ ವಸಂತ ಪಂಚಮಿ ಎಂಬ ಹೆಸರಿನಲ್ಲಿ ಚೈತ್ರ ಶುಕ್ಲ ಪಂಚಮಿಯಂದು ಸರಸ್ವತೀ ಪೂಜೆಯನ್ನು ನಡೆಸುತ್ತಾರೆ. ಸರಸ್ವತೀಯ ಜನ್ಮದಿನವೇ ವಸಂತಪಂಚಮಿ ಎಂಬ ನಂಬಿಕೆಯಿದೆ. ಶ್ರೀಪಂಚಮೀ ಎಂದೂ ಈ ದಿನವನ್ನು ಕರೆಯುತ್ತಾರೆ. ಶಾರದೆಯ ಪ್ರಿಯ ವಾದ ಬಣ್ಣ ಹಳದಿ. ಆದ್ದರಿಂದ, ಹಳದಿ ಉಡುಗೆಗಳನ್ನು ತೊಟ್ಟು, ಹಳದಿ ಬಣ್ಣದ ಖಾದ್ಯಗಳನ್ನು ನೈವೇದ್ಯ ಮಾಡುವ ಕ್ರಮವೂ ಇದೆ. ಬೌದ್ಧ, ಜೈನ ಹಾಗೂ ಸಿಕ್ಖರಲ್ಲೂ ಶಾರದಾಪೂಜೆಯ ಸಂಪ್ರ ದಾ ಯ ವಿದೆ.
– ಸೂರ್ಯ ಹೆಬ್ಟಾರ್