Advertisement

NCP Crisis; ನನಗೆ ನಿವೃತ್ತರಾಗಲು ಹೇಳಲು ಅವರು ಯಾರು? ಸೋದರಳಿಯನ ವಿರುದ್ಧ ಗುಡುಗಿದ ಶರದ್

11:23 AM Jul 08, 2023 | Team Udayavani |

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಯ ಬಿಕ್ಕಟ್ಟು ಮುಂದುವರಿದಿದೆ. ಸೋದರಳಿಯ ಅಜಿತ್ ಪವಾರ್ ಅವರ ‘ನಿವೃತ್ತಿ’ ಹೇಳಿಕೆಗೆ ತಿರುಗೇಟು ನೀಡಿರುವ ವರಿಷ್ಠ ಶರದ್ ಪವಾರ್, ‘ನಾ ಟೈಯರ್ಡ್ ಹು, ನಾ ರಿಟೈಯರ್ಡ್ ಹು’ (ದಣಿದೂ ಇಲ್ಲ, ನಿವೃತ್ತನೂ ಅಲ್ಲ) ಎಂದು ಹೇಳಿದ್ದಾರೆ.

Advertisement

ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ತನ್ನನ್ನು ಮುಂದುವರಿಯುವಂತೆ ಹೇಳಿರುವ ಕಾರಣ 82 ವರ್ಷವಾದರೂ ನಾನಿನ್ನು ಕೆಲಸ ಮಾಡುತ್ತಿದ್ದೇನೆ ಎಂದರು.

ತನಗೆ ಇನ್ನೂ ವಯಸ್ಸಾಗಿಲ್ಲ ಎಂದ ಶರದ್ ಪವಾರ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ದ ‘ನಾ ಟೈಯರ್ಡ್ ಹು, ನಾ ರಿಟೈಯರ್ಡ್ ಹು’ ಮಾತನ್ನು ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ಅವರು ಯಾವುದೇ ಸಚಿವ ಸ್ಥಾನವನ್ನು ಹೊಂದಿಲ್ಲ ಎಂದ ಎನ್‌ಸಿಪಿ ಮುಖ್ಯಸ್ಥ ಶರದ್, “ನನಗೆ ನಿವೃತ್ತರಾಗಲು ಹೇಳಲು ಅವರು ಯಾರು? ನಾನು ಇನ್ನೂ ಕೆಲಸ ಮಾಡಬಹುದು” ಎಂದರು.

ಶರದ್ ಪವಾರ್ ಅವರ ಸಭೆ ಕಾನೂನು ಬಾಹಿರ ಎಂಬ ಅಜಿತ್ ಹೇಳಿಕೆಗೆ ತಿರುಗೇಟು ನೀಡಿದ ಶರದ್, ‘ಪ್ರಫುಲ್ ಪಟೇಲ್ ಸೇರಿ ಪಕ್ಷದಲ್ಲಿ ಮಾಡಿರುವ ಎಲ್ಲಾ ನೇಮಕಾತಿಗಳು ಕಾನೂನು ಬಾಹಿರ’ ಎಂದರು.

Advertisement

ಶರದ್ ಪವಾರ್ ಪರಿವಾರ ರಾಜಕಾರಣ ಮಾಡುತ್ತಿದ್ದಾರೆಂಬ ಅಜಿತ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಳಿಯ ಅಜಿತ್ ಗೆ ನಾಲ್ಕು ಬಾರಿ ಉಪಮುಖ್ಯಮಂತ್ರಿ ಹುದ್ದೆ ಕೊಡಲಾಗಿತ್ತು. ಅಲ್ಲದೆ ಪ್ರಮುಖ ಖಾತೆಗಳನ್ನು ನೀಡಲಾಗಿತ್ತು. ಚುನಾವಣೆಯಲ್ಲಿ ಸೋತರೂ ಯುಪಿಎಯಲ್ಲಿ ಪ್ರಫುಲ್ ಪಟೇಲ್ ಅವರನ್ನು ಮಂತ್ರಿ ಮಾಡಲಾಯಿತು, ಯುಪಿಎಯಲ್ಲಿ ಪಿಎ ಸಂಗ್ಮಾ ಅವರ ಪುತ್ರಿ ಕೇಂದ್ರ ಸಚಿವೆಯಾಗಿ ನೇಮಕಗೊಂಡರು, ಸುಪ್ರಿಯಾ ಸುಳೆ ಅವರಿಗೆ ಇನ್ನೂ ಆ ಅವಕಾಶ ಸಿಕ್ಕಿಲ್ಲ, ಅಜಿತ್ ಹೀಗೆ ಹೇಳುತ್ತಿರುವುದು ಹೇಗೆ? ಇದು ತಪ್ಪು” ಎಂದು  ಎನ್‌ಸಿಪಿ ಮುಖ್ಯಸ್ಥರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next