Advertisement

ಶಾಂತಜ್ಜಿಯ ಗೋಳಿಗೆ ಧ್ವನಿಯಾದ ತಾ.ಪಂ.​​​​​​​

06:00 AM Jun 29, 2018 | |

ಕುಂದಾಪುರ: ಕುಳ್ಳುಂಜೆ ಗ್ರಾಮದ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಮಾವಿನಕೊಡ್ಲು ಬಳಿಯ ಕೋವಿನ ಗುಡ್ಡೆಯ ನಿವಾಸಿ ಶಾಂತಾಬಾಯಿ ಅವರ ಕಷ್ಟದ ಕಥೆಗೆ ತಾಲೂಕು ಪಂಚಾಯತ್‌ನವರು ಸ್ಪಂದಿಸಿದ್ದಾರೆ. ಈ ಅಜ್ಜಿಯ ಕಷ್ಟದ ಕುರಿತು ಉದಯವಾಣಿ ಜೂ.28ರಂದು  ಶಾಂತಜ್ಜಿಯ ಗೋಳು ಕೇಳುವವರೇ ಇಲ್ಲ… ಎಂದು ವರದಿ ಮಾಡಿತ್ತು.

Advertisement

ಗುಡಿಸಲೊಂದರಲ್ಲಿ ಶಾಂತಾಬಾಯಿ ಅವರ ಪುತ್ರಿ ಸೀತಾ ಬಾಯಿ ಹಾಗೂ ಅವರ 8 ವರ್ಷದ ಪುತ್ರಿ ವಾಸ್ತವ್ಯ ಹೊಂದಿದ್ದಾರೆ. ಸೀತಾ ಅವರು ಕೂಲಿ ಕೆಲಸ ಮಾಡುತ್ತಿದ್ದು, ಇದೇ ಈ ಕುಟುಂಬದ ಒಪ್ಪೊತ್ತಿನ ಊಟಕ್ಕೆ ದಾರಿಯಾಗಿದೆ. ಈಗಿನ ಮಳೆಗೆ ಆ ಗುಡಿಸಲಲ್ಲಿ ವಾಸಿಸುವುದೇ ಕಷ್ಟಕರವಾಗಿದೆ.  ಮೂರು ವರ್ಷಗಳ ಹಿಂದೆ ಮನೆ ಮಂಜೂರಾಗಿದೆ. ಆದರೆ ತಾಂತ್ರಿಕ ಕಾರಣದಿಂದ ಪಂಚಾಂಗ ಹಂತದಲ್ಲಿ ಸ್ಥಗಿತಗೊಂಡಿದ್ದು ಅನುದಾನ ಲಭ್ಯವಾಗಿಲ್ಲ. ಈಗ ಇರುವ ಗುಡಿಸಲಿನಲ್ಲಿ ಇವರೊಂದಿಗೆ ಹಸು, ನಾಯಿ, ಕೋಳಿ ಎಲ್ಲರಿದ್ದರೂ ಸರಕಾರದಿಂದ ಮಾತ್ರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. 

ತಾ. ಪಂ. ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ ಅವರು ಗುರುವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾವಿಸಿದರು. ವರದಿ ಪ್ರಕಟವಾದ “ಉದಯವಾಣಿ’ಯನ್ನು ಪ್ರದರ್ಶಿಸಿ ಈ ಭಾಗದ ಮೂರು ಮನೆಗಳಲ್ಲಿ ಶೌಚಾಲಯ ಇಲ್ಲ. ಈ ಅಜ್ಜಿಗೆ ಮನೆಯೇ ಇಲ್ಲ. ಹಾಗಿದ್ದರೂ ಸ್ವತ್ಛ ತಾಲೂಕು ಪುರಸ್ಕಾರ ಪಡೆದಿರುವುದು ನೈತಿಕತೆಯೇ ಎಂದು ಪ್ರಶ್ನಿಸಿದರು. ಆಧಾರ್‌ ಜೋಡಣೆಯಾಗಿಲ್ಲ ಎಂದು 2015-16ನೇ ಸಾಲಿನಲ್ಲಿ ಅಂಬೇಡ್ಕರ್‌ ಯೋಜನೆಯಡಿ ಮನೆ ಮಂಜೂರಾಗಿದ್ದರೂ ಅನುದಾನ ಕೊಟ್ಟಿಲ್ಲ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದರು. 

ಘಟನೆ ಕುರಿತು ತತ್‌ಕ್ಷಣ ವರದಿ ತರಿಸುವುದಾಗಿ ತಹಶೀಲ್ದಾರ್‌ ರವಿ ಹೇಳಿದರು. ಭೇಟಿ ನೀಡಿ ಪರಿಶೀಲಿಸುವುದಾಗಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕಿರಣ್‌ ಕೆ. ಪೆಡೆ°àಕರ್‌ ಹೇಳಿದರು. ಸಭೆ ಮುಗಿಯುವುದರೊಳಗೆ ಆಧಾರ್‌ ಲಿಂಕ್‌ ಸಮಸ್ಯೆಯನ್ನು ಸರಿಪಡಿಸಿ ಅಜ್ಜಿ ಮನೆ ನಿರ್ಮಾಣಕ್ಕೆ ಮುಂದಿನ ಹಂತದ ಅನುದಾನ ದೊರೆಯುವ ಕುರಿತು ಕೆಲಸ ಕೂಡಾ ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next