ನರಗುಂದ: ಕನ್ನಡ ಕೈಂಕರ್ಯದೊಂದಿಗೆ ಕನ್ನಡ ಸ್ವಾಮೀಜಿ ಎಂದೇ ಚಿರಪರಿಚಿತರಾದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಅವರು ಗೋವಾದಲ್ಲಿರುವ ಕನ್ನಡ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿರುವ ಗ್ರಂಥಾಲಯಕ್ಕೆ ಶ್ರೀಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ವಿವಿಧ ಕನ್ನಡ ಪುಸ್ತಕಗಳನ್ನು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಿಗರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಶ್ರೀಗಳು, ಗಡಿನಾಡಿನ ಕನ್ನಡಿಗರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡವನ್ನು ಸದೃಢಗೊಳಿಸಬೇಕಾಗಿದೆ ಎಂದರು.
ಕನ್ನಡ ಭಾಷೆಯ ಉಳಿಸಿ ಬೆಳೆಸಲು ಕನ್ನಡಾಭಿಮಾನಿಗಳು ಪಣತೊಡಬೇಕಾಗಿದೆ. ಕನ್ನಡ ಉಳಿದರೆ ಮಾತ್ರ ನಾವು ಬೆಳೆಯಲು ಸಾದ್ಯ.ಆ ನಿಟ್ಟಿನಲ್ಲಿ ತಾವೆಲ್ಲ ಗಡಿಯಲ್ಲಿ ಕನ್ನಡಾಭಿಮಾನವನ್ನು ಮೆರೆಯಬೇಕು ಎಂದು ಹೇಳಿದರು.
ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸಿದ್ದಣ್ಣ ಮೇಟಿ, ಕನ್ನಡ ಶಾಲಾ ಶಿಕ್ಷಕರು ಪ್ರಮುಖರು ಹಾಗೂ
ಬಸುರಾಜ ಗುಪ್ತಿ ,ಕಂಬಾಳಯ್ಯ ಹಿರೇಮಠ, ಹನುಮಂತ ನಡುಗಡ್ಡಿ, ಕೃಷ್ಣಾ ಚವ್ಹಾಣ, ಶಾಂತವೀರ ಸ್ವಾಮೀಜಿ, ಹನುಮಂತ ಕಂಠಿ ಇದ್ದರು.