ಗದಗ: ಸಕ್ಕರಿ ಬಾಳಾಚಾರ್ಯರು ಕನ್ನಡದ ನೆಲದಲ್ಲಿ ಮರಾಠಿ ನಾಟಕ ಪ್ರದರ್ಶನದ ವಿರುದ್ಧ ಅಸಮಾಧಾನ ಹೊಂದಿ ಕನ್ನಡ
ನಾಟಕ ರಚಿಸಿ ಪ್ರದರ್ಶಿಸುವ ಮೂಲಕ ಕನ್ನಡದ ವಾತಾವರಣ ಪಸರಿಸುವ ಮಹತ್ವದ ಕಾರ್ಯ ಮಾಡಿದರು ಎಂದು ಖ್ಯಾತ ವಿಮರ್ಶಕ ಡಾ| ಶ್ಯಾಮಸುಂದರ ಬಿದರಕುಂದಿ ಹೇಳಿದರು.
Advertisement
ನಗರದಲ್ಲಿ ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಹಾಗೂ ಜಿಲ್ಲಾ ಕಸಾಪ ವತಿಯಿಂದ ಶಾಂತಕವಿಗಳ 168ನೇಜನ್ಮ ದಿನೋತ್ಸವ ಹಾಗೂ 2024ನೇ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೀರ್ತನೆ ರಚಿಸಿ ಪ್ರಸ್ತುಪಡಿಸುವ ಮೂಲಕ ಕನ್ನಡದ ಕೀರ್ತನಕಾರರಾಗಿ ಕನ್ನಡದ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು
ಎಂದು ಹೇಳಿದರು. 1918ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬೇಡಲು ಬಂದಿಹೆ ದಾಸಯ್ಯ ಎನ್ನುತ್ತ ಮನೆ-ಮನೆಗೆ
ಹೋಗಿ ಹಣ ಸಂಗ್ರಹಿಸಿ ಸಾಹಿತ್ಯ ಸಮ್ಮೇಳನ ನಡೆಯುವಂತೆ ಮಾಡಿದರು. ಇಂದು ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ಕಾರಕ್ಕೆ ಕೈಯೊಡ್ಡುವ ಪರಿಪಾಠವಿದೆ. ಜನರ ಸಹಾಯದಿಂದ ಸಮ್ಮೇಳನ ಮಾಡುವುದು ಸೂಕ್ತವಾಗಿದೆ ಎಂದರು.
Related Articles
ಪೂಜಾರ ಡಾ| ರಶ್ಮಿ ಅಂಗಡಿ, ಡಾ| ಅರ್ಜುನ ಗೊಳಸಂಗಿ, ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಶೇಖಣ್ಣ ಕಳಸಾಪುರಶೆಟ್ಟರ, ಅನ್ನದಾನಿ ಹಿರೇಮಠ ಸೇರಿದಂತೆ ಇತರರಿದ್ದರು. ಡಾ| ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.
Advertisement