ಮಂಗಳೂರು: ಓವರ್‌ಲೋಡಿಂಗ್ ಹಾಗೂ ಪೊಲೀಸ್- ಸಾರಿಗೆ ಇಲಾಖೆಯವರ ದೌರ್ಜನ್ಯ ದಂತಹ ಸಮಸ್ಯೆಗಳನ್ನು ಒಗ್ಗಟ್ಟಾಗಿ ಎಲ್ಲ ಟ್ರಕ್ ಚಾಲಕರೂ ಟ್ರಕ್ ಮಾಲಕರ ಸಂಘಟನೆಗಳ ನೆರವಿನೊಂದಿಗೆ ಪರಿಹರಿಸಿಕೊಳ್ಳಬೇಕು ಎಂದು ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್ ಪೋರ್ಟರುಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ| ಜಿ.ಆರ್. ಷಣ್ಮುಗಪ್ಪ ಹೇಳಿದ್ದಾರೆ.
ಪಣಂಬೂರಿನ ಜೆಎನ್‌ಪಿಟಿ ಸಭಾಂಗಣದಲ್ಲಿ ಅವರು ಬುಧವಾರ 31ನೇ ಆಡಳಿತ ಸಮಿತಿ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಓವರ್‌ಲೋಡಿಂಗ್ ಎನ್ನುವುದು ಎಲ್ಲ ಕಡೆಯಲ್ಲೂ ಕಂಡುಬರುತ್ತಿರುವ ಸಮಸ್ಯೆಯಾಗಿದೆ, ನಿಗದಿತ ತೂಕಕ್ಕಿಂತ ಹೆಚ್ಚು ಹೇರಿಕೆಯಿಂದ ನಮ್ಮದೇ ರಸ್ತೆಗಳು ಹಾಳಾಗುತ್ತಿವೆ. ಓವರ್‌ಲೋಡಿಂಗ್ ರೀತಿಯಲ್ಲಿಯೇ ಓವರ್ ಡೈಮೆನ್ಶನ್ ಅಥವಾ ನಿಯಮ ಅನು ಮೋದಿತ ಗಾತ್ರಕ್ಕಿಂತಲೂ ಮೀರಿದ ಗಾತ್ರದ ಸರಕು ಹೇರುವುದು ಸರಿಯಲ್ಲ, ದೇಶದಲ್ಲೇ ಕರ್ನಾಟಕ ರಾಜ್ಯವುಓವರ್‌ಲೋಡಿಂಗ್‌ನಲ್ಲಿ ನಂಬರ್ ಆಗಿರುವುದು ಕಳವಳಕಾರಿ ಎಂದರು.
ರಾಜ್ಯದಲ್ಲಿ ಲಾರಿ ಮಾಲಕರ ಸಂಘಟನೆ ಬಲವಾಗಿ ಬೆಳೆ ದಿದೆ, ಅದೇ ಮಾದರಿಯಲ್ಲಿ ಎಲ್ಲೆಡೆ ಸಂಘಟನೆಗಳು ದೃಢ ವಾಗಬೇಕು ಎಂದರು.
ಅಧ್ಯಕ್ಷ ಗೋಪಾಲ ನಾಯ್ಡು ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರ ಡಾ| ಸುಂದರರಾಜ ಪೊನ್ನು ಸ್ವಾಮಿ, ಟಿಎನ್‌ಎಲ್‌ಒಎ ಅಧ್ಯಕ್ಷ ಕುಮಾರಸ್ವಾಮಿ, ಕೆಜಿಟಿಎ ಅಧ್ಯಕ್ಷ ಪ್ರಕಾಶ್ ಪಾಂಡೆ, ಟಿಎಸ್‌ಎಲ್‌ಒಎನ ದುರ್ಗಾಪ್ರಸಾದ್, ಮಂಗಳೂರು ಎಂಟಿಸಿ ಅಧ್ಯಕ್ಷ ರಾಜೇಶ್ ಹೊಸಬೆಟ್ಟು, ಮೊಹಮ್ಮದ್ ಇಕ್ಬಾಲ್, ಡಿಕೆಟಿಒಎ ಅಧ್ಯಕ್ಷ ಸುಜಿತ್ ಆಳ್ವ, ಅಧ್ಯಕ್ಷ ಸುನಿಲ್ ಡಿ’ಸೋಜಾ, ಪ್ರಧಾನ ಕಾರ್ಯದಶಿ ಸುಶಾಂತ್ ಶೆಟ್ಟಿ, ಸಲಹೆಗಾರ ಬಿ.ಎಸ್. ಚಂದ್ರು ಉಪಸ್ಥಿತರಿದ್ದರು. ಶುಭಂ ಸುಂದರರಾಜ್ ಸ್ವಾಗತಿಸಿದರು.
ಟ್ರಕ್ ಮಾಲಕರ ಬೇಡಿಕೆ ಈಡೇರಿಕೆಗೆ 21 ದಿನ ಗಡು
ಮಂಗಳೂರು: ಟ್ರಕ್ ಮಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ 21 ದಿನಗಳ ಗಡುವು ನೀಡಲಾಗುವುದು. ಈಡೇರಿಸದೆ ಇದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸ ಲಾಗಿದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಮಾಲಕರ ಮತ್ತು ಏಜೆಂಟರ ಅಸೋಸಿಯೇಶನ್‌ನ ಆಡಳಿತ ಸಮಿತಿ ಅಧ್ಯಕ್ಷ ಡಾ| ಜಿ.ಆರ್. ಷಣ್ಮುಖಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಬೇಕು, 60 ಕಿ.ಮೀ. ವ್ಯಾಪ್ತಿ ಯೊಳಗಿನ ಅನಧಿಕೃತ ಟೋಲ್ ಸಂಗ್ರಹ ಕೇಂದ್ರಗಳನ್ನು ತೆರವು ಗೊಳಿಸಬೇಕು, ಟೋಲ್‌ಗಳ ದರ ನಿಯಂತ್ರಿಸಬೇಕು. ಟ್ರಕ್ ಟರ್ಮಿ ನಲ್‌ಗಳನ್ನು ನಿರ್ಮಿಸಬೇಕು. ಇತ್ಯಾದಿ ಮುಖ್ಯ ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ ಎಂದರು.
ಹೆದ್ದಾರಿ ದುರಸ್ತಿಗೊಳಿಸಿ
ಸಕಲೇಶಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಕೂಡಲೆ ದುರಸ್ತಿಗೊಳಿಸಬೇಕು. ಓವರ್ ಲೋಡಿಂಗ್ ನಿಷೇಧ, ಬೆಲೆ ಏರಿಕೆ ಆಧರಿಸಿ ಸಾರಿಗೆ ದರ ನಿಗದಿಗೊಳಿಸಬೇಕು- ಅದಕ್ಕಾಗಿಯೇ ಪ್ರತ್ಯೇಕ ಪ್ರಾಧಿಕಾರ ಮಾಡಬೇಕು ಇತ್ಯಾದಿ ಬೇಡಿಕೆಗಳೂ ಇವೆ ಎಂದರು.