Advertisement

ಚಂದ್ರಯಾನ-2: ಪ್ರಗ್ಯಾನ್ ರೋವರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಷಣ್ಮುಗ ಸುಬ್ರಹ್ಮಣಿಯನ್

05:04 PM Aug 02, 2020 | keerthan |

ಚೆನ್ನೈ: ಈ ಹಿಂದೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ -2 ಯೋಜನೆಯ ವಿಕ್ರಮ್ ಲ್ಯಾಂಡರ್ ಪತ್ತೆಗೆ ಸಹಕರಿಸಿದ್ದ ಚೆನ್ನೈ ಮೂಲದ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣಿಯನ್ ಈಗ ಪ್ರಗ್ಯಾನ್ ರೋವರ್ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

Advertisement

ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಸ್ಮೂತ್ ಲ್ಯಾಂಡಿಂಗ್ ಆಗಲು ವಿಫಲಗೊಂಡು ಪತನಗೊಂಡಿದೆ. ಆದರೆ ಪ್ರಗ್ಯಾನ್ ರೋವರ್ ಹಾಳಾಗದೆ ಇನ್ನೂ ಜೀವಂತವಾಗಿದೆ ಎಂದು ಷಣ್ಮುಗ ಸುಬ್ರಹ್ಮಣಿಯನ್ ಹೇಳಿದ್ದಾರೆ.

ತಾವು ಕಂಡ ಅವಶೇಷಗಳು ವಿಕ್ರಮ್ ಲ್ಯಾಂಡರ್ ನ ಲ್ಯಾಂಗ್ ಮುಯಿರ್ ಪ್ರೋಬ್ ನದ್ದಾಗಿದೆ. ಅಮೇರಿಕಾದ ನಾಸಾ ಕಂಡಿರುವ ಅವಶೇಷಗಳು ಬಹುಶಃ ಆಂಟೆನಾ, ರೆಟ್ರೋ, ಬಾರ್ಕಿಂಗ್ ಇಂಜಿನ್ ಗಳು, ಸೋಲಾರ್ ಪ್ಯಾನಲ್ ಗಳಾಗಿದ್ದರಬೇಕು ಎಂದು ಹೇಳಿಕೊಂಡಿದ್ದಾರೆ.

ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದಿಂದ ರೋವರ್ ಕೆಲವು ಮೀಟರ್ ದೂರ ಸಾಗಿದೆ. ವಿಕ್ರಮ್ ಲ್ಯಾಂಡರ್ ಸ್ಮೂತ್ ಲ್ಯಾಂಡಿಂಗ್ ಆಗದ ಕಾರಣ ಅದರ ಪೇಲೋಡ್ ಕಳಚಿಕೊಂಡಿದೆ ಎಂದರೆ ಷಣ್ಮುಗ ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next