ಸಿದ್ದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯ ಅನತಿದೂರದ ಶಂಕರನಾರಾಯಣ ಸರ್ಕಲ್ ಬಳಿ ಮಲಗಿದ್ದ ದನವನ್ನು ದನ ಕಳ್ಳರು ಜೂ.25ರಂದು ಬೆಳಗಿನ ಜಾವದಲ್ಲಿ ಐಷಾರಾಮಿ ಕಾರಿನಲ್ಲಿ ಬಂದು ಕಳವು ಮಾಡಿಕೊಂಡು ಹೋದ ಕಳ್ಳರನ್ನು ಶನಿವಾರ ಶಂಕರನಾರಾಯಣ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ, ನ್ಯಾಯಲಾಯಕ್ಕೆ ಹಾಜರು ಪಡಿಸಿದರು.
ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಶಂಕರನಾರಾಯಣ ಸರ್ಕಲ್ ಬಳಿ ಮಲಗಿದ್ದ ದನವನ್ನು ಕಳ್ಳರು ಕಾರಿನಲ್ಲಿ ಕದ್ದೊಯಿದ್ದರು. ಸರ್ಕಲ್‌ನಲ್ಲಿ ಶಂಕರನಾರಾಯಣ ಗ್ರಾ.ಪಂ. ಅಳವಡಿಸಿದ ಸಿಸಿ ಕೆಮರಾದಲ್ಲಿ ಘಟನೆ ಬಗ್ಗೆ ದಾಖಲಾಗಿತ್ತು.
ಸಿಸಿ ಕೆಮರಾ ಆಧರಿಸಿ, ಶಂಕರನಾರಾಯಣ ಪೊಲೀಸರು ಮಂಗಳೂರು ಅಸೈಗೋಳಿ ಎಂಬಲ್ಲಿ ಆರೋಪಿಗಳಾದ ನಿಝಾಮುದ್ದೀನ್ ಎ.ಎಚ್., ಮತ್ತು ಮಹಮ್ಮದ್ ಅನ್ಸಾರ್‌ನನ್ನು ಬಂಧಿಸಿದರು. ಆರೋಪಿಗಳು ಕೃತ್ಯಕ್ಕೆ ಬಳಸಿದ ಮಾರುತಿ ಬಲೇನೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಲಯ15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸರ ಸಾಧನೆಗೆ ಹಿಂದೂಪರ ಸಂಘಟನೆಯಿಂದ ಶ್ಲಾಘನೆ: ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ನಿರಂತರವಾಗಿ ದನ ಕಳ್ಳತನ ನಡೆಯುತ್ತಿದ್ದೆ. ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಂಕರನಾರಾಯಣ ಮತ್ತು ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ನಿರಂತರವಾದ ದನ ಕಳ್ಳತನ ನಡೆಯುತ್ತಿದೆ. ದನ ಕಳ್ಳರನ್ನು ಪೊಲೀಸರು ಮಟ್ಟಹಾಕಬೇಕು. ದನ ಕಳ್ಳರನ್ನು ಪೊಲೀಸರು ಬಂಧಿಸಿದ ಬಗ್ಗೆ ಹಿಂದೂಪರ ಸಂಘನೆ ಶ್ಲಾಘಿಸಿದೆ.
ಶಂಕರನಾರಾಯಣ ಪೊಲೀಸ್ ಉಪ ನಿರೀಕ್ಷಕರಾದ ನಾಸೀರ್ ಹುಸೇನ್, ಶಂಭುಲಿಂಗಯ್ಯ ಮತ್ತು ಸಿಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡರು.