ಗಂಗಾವತಿ: ಕನ್ನಡಿಗರ ಸಾರಸ್ವತ ಲೋಕದ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳು ಮತ್ತು ರಾಜಕೀಯ ಗಂಜಿ ಗಿರಾಕಿ ಮುಖಂಡರು ಸ್ಪರ್ಧೆ ಮಾಡುವ ಮೂಲಕ ಪುನರ್ವಸತಿ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ ಎಂದು ಕನ್ನಡ ಜನಶಕ್ತಿ ಸಂಘಟನೆಯ ಶಂಕರ ಹೂಗಾರ ಆರೋಪಿಸಿದ್ದಾರೆ .
ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಗೆ ಕನ್ನಡಪರ ಮತ್ತು ಪುಸ್ತಕಗಳನ್ನು ಹೊರತಂದಿರುವ ಕನ್ನಡ ಸಂಘಟನೆಗಳಿಗೆ ಪ್ರೋತ್ಸಾಹ ದಾಯಕವಾಗಿರಲಿ ವ್ಯಕ್ತಿಗಳು ಸ್ಪರ್ಧೆ ಮಾಡಿ ಆ ಮೂಲಕ ಕನ್ನಡಿಗರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು .
ಆದರೆ ರಾಜಕಾರಣಿಗಳು ನಿವೃತ್ತ ಅಧಿಕಾರಿಗಳು ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದರೆ ಅವರಿಗೆ ಪುನರ್ವಸತಿಯ ಚಿಂತೆಯಾಗಿದೆ ಆದ್ದರಿಂದ ಕಸಾಪವನ್ನು .ಸಿ ಕೆ ರಾಮೇಗೌಡ ಎಂಬ ವ್ಯಕ್ತಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ಇವರು ಯಾವುದೇ ಅಧಿಕಾರಿ ಆಗಿಲ್ಲ ಯಾವುದೇ ಪಕ್ಷದ ಸದಸ್ಯತ್ವ ಪಡೆದಿಲ್ಲ. ಆದ್ದರಿಂದ ರಾಮೇಗೌಡರನ್ನು ಗೆಲ್ಲಿಸುವ ಮೂಲಕ ಕನ್ನಡದ ಕೆಲಸ ಮಾಡಲು ಶಕ್ತಿ ತುಂಬಬೇಕು .ಉಳಿದವರು ತಮ್ಮ ಅಸ್ತಿತ್ವಕ್ಕಾಗಿ ಸ್ಥಾನಮಾನಕ್ಕಾಗಿ ಕಸಾಪವನ್ನು ಅವಲಂಬಿಸಿದ್ದಾರೆ.
ಕಸಾಪ ಸಂಸ್ಥೆ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದೆ ಕನ್ನಡದ ಕನ್ನಡದ ಶಾಸ್ತ್ರೀಯ ಭಾಷೆ ಕನ್ನಡ ನುಡಿ ಜಲ ಭಾಷೆಯನ್ನು ಸಂರಕ್ಷಣೆ ಮಾಡುವ ರಾಮೇಗೌಡ್ರು ಗೆಲ್ಲುವುದು ಖಚಿತ .ಮೈಸೂರು ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರಾಮೇಗೌಡ ಸ್ಪರ್ಧೆಯನ್ನು ಪ್ರತಿಯೊಬ್ಬ ಕನ್ನಡಿಗರು ಸ್ವಾಗತಿಸುತ್ತಿರುವುದು ಸಂತೋಷ ತಂದಿದೆ.
ಆ ಶಾಪ ಬೆಂಗ್ಳೂರು ಘಟಕ ಅಲ್ಲದೆ ಕಲಬುರಗಿ ಬೆಳಗಾವಿ ಮೈಸೂರು ಬೆಂಗಳೂರು ವಲಯವಾರು ಸಂಚಾಲಕರನ್ನು ನೇಮಕ ಮಾಡಿ ಅವರಿಂದ ಕನ್ನಡದ ಕೆಲಸಗಳನ್ನು ಮಾಡಲು ಯೋಜನೆ ರೂಪಿಸಲಾಗುತ್ತದೆ ಎಂದರು .