Advertisement

ಬಾಣಸಿಗರಿಗೂ ಸೌಲಭ್ಯ ಕಲ್ಪಿಸಿ: ಶಂಕರರಾವ್‌ ಆಗ್ರಹ

12:12 PM Jun 24, 2017 | |

ದಾವಣಗೆರೆ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿ ಅಡುಗೆ ಕಾರ್ಮಿಕರಿಗಾಗಿಯೇ ಪ್ರತ್ಯೇಕ ಮಂಡಳಿ ಪ್ರಾರಂಭ, ಆರೋಗ್ಯ ವಿಮೆ ಇತರೆ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರಕ್ಕೆ ಅಡುಗೆ ಕೆಲಸ ಮಾಡುವವರ ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರ ಸಂಘ ರಾಜ್ಯ ಅಧ್ಯಕ್ಷ ಬಿ.ಜಿ. ಶಂಕರ್‌ರಾವ್‌ ಒತ್ತಾಯಿಸಿದ್ದಾರೆ.  

Advertisement

ಶುಕ್ರವಾರ ರೋಟರಿ ಭಾಲಭವನದಲ್ಲಿ ರಾಜ್ಯ ಮಟ್ಟದ ಕಾರ್ಮಿಕರ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರಂತೆ ಸರ್ಕಾರದ ವಿವಿಧ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರು ಎಲ್ಲೆಡೆ ಸಂಘಟಿತರಾಗಬೇಕು. ಎಲ್ಲರೂ ಒಗ್ಗಟ್ಟಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಬೇಕು ಎಂದರು.

ಯಾವುದೇ ಸಭೆ, ಸಮಾರಂಭ, ಶುಭ ಕಾರ್ಯವೇ ಇರಲಿ ಅಡುಗೆ ಮಾಡುವರು ಮತ್ತು ಸಹಾಯಕರು ಬೇಕೇ ಬೇಕು. ಇಡೀ ಕಾರ್ಯಕ್ರಮದ ಯಶಸ್ಸಿಗೆ ಬಹು ಮುಖ್ಯ ಕಾರಣವಾಗುವ ಈ ಕೆಲಸಗಾರರಿಗೆ ಸರ್ಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಸಂಘಟನೆ ಕೊರತೆ ಎಂದು ಹೇಳಿದರು.

ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತರಾಗಬೇಕು. ಸಂಘಟನೆಯನ್ನೇ ನೋಡಿ ಯಾರೇ ಆಗಲಿ ನಮ್ಮ ಬೇಡಿಕೆ, ಒತ್ತಾಯ ಕೇಳುತ್ತಾರೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸಂಘಟನೆ ವಿಸ್ತರಿಸಲಾಗುವುದು. ರಾಜ್ಯ ಮಟ್ಟದ ಸಮಾವೇಶ ಮೂಲಕ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರ ಬೇಡಿಕೆ ಈಡೇರಿಕೆಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. 

ಸದಾ ಅಪಾಯದಲ್ಲಿ ಕೆಲಸ ಮಾಡುವಂತಹ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರಿಗೆ ತೀರಾ ಅಗತ್ಯವಾದ ಕಡ್ಡಾಯವಾಗಿ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಪಿಂಚಣಿ ಮತ್ತಿತರ ಸೌಲಭ್ಯ ಬೇಕು. ಈ ಸೌಲಭ್ಯ ಪಡೆಯುವಂತಾಗಲು ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮಗಳಲ್ಲಿನ ಅಡುಗೆ ಕೆಲಸ ಮಾಡುವರು ಮತ್ತು ಸಹಾಯಕರು ಸಂಘಟನೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. 

Advertisement

ಪ್ರಾಸ್ತಾವಿಕ ಮಾತುಗಳಾಡಿದ ಕೆ.ಎನ್‌. ರವಿಕುಮಾರ್‌, ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರ ಸಮಗ್ರ ಅಭಿವೃದ್ಧಿಗೆ ತೀರಾ ಅತ್ಯಗತ್ಯವಾಗಿರುವ ಕಲ್ಯಾಣ ಮಂಡಳಿ, ವಿಮೆ ಹಾಗೂ ಸರ್ಕಾರದ ಇತರೆ ಸೌಲಭ್ಯ ಪಡೆಯಲು ಸಂಘಟನೆ ಅತೀ ಮುಖ್ಯ. ಹಾಗಾಗಿ ಅಡುಗೆ ಮಾಡುವವರು ಮತ್ತು ಸಹಾಯಕರು ಸಂಘಟಿತರಾಗಬೇಕು.

ಪ್ರಬಲವಾಗಿ ಸಂಘಟಿತರಾಗುವ ಮೂಲಕ ಹೋರಾಟದ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖಂಡ ಪೂಜಾರ್‌ ಬಸವರಾಜಪ್ಪ ಮಾತನಾಡಿ, ಅತಿ ಪವಿತ್ರ ಮತ್ತು ಮುಖ್ಯವಾಗ ಅಡುಗೆ ಕೆಲಸ ಮಾಡುವರು ಮತ್ತು ಅವರ ಸಹಾಯಕರಿಗೆ ಕಚೇರಿಗೆ ಅಗತ್ಯ ನಿವೇಶನ ಒಳಗೊಂಡಂತೆ ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

 ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಆನಂದರಾವ್‌, ರೈತ ಮುಖಂಡ ಕೆ.ಎನ್‌. ವೆಂಕಟೇಶ್‌, ಪ್ರವೀಣ್‌ ಪವಾರ್‌, ಶ್ರೀನಿವಾಸ್‌, ನ್ಯೂ ಇಂಡಿಯಾ ಅಷ್ಯುರೆನ್ಸ್‌ ಕಂಪನಿ ವಿಭಾಗೀಯ ವ್ಯವಸ್ಥಾಪಕ ನಾಗರಾಜ್‌, ಅಭಿವೃದ್ಧಿ ಅಧಿಕಾರಿ ಆರ್‌.ಟಿ. ಮೃತ್ಯುಂಜಯ, ಎಂ.ಜಿ. ಶ್ರೀಕಾಂತ್‌ ಇತರರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next