Advertisement
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕೈಮಗ್ಗ ನೇಕಾರರ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
Related Articles
Advertisement
ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಐವರು ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಹಾಗೂ ಮೂವರಿಗೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಪುರಸ್ಕೃತರ ವಿವರರೇಷ್ಮೆ ಕೈಮಗ್ಗ ವಿಭಾಗ: ರೇಷ್ಮೆ ಸೀರೆಯಲ್ಲಿ ರೈತರ ಸುಗ್ಗಿ ಚಿತ್ರಣ ಬಿಡಿಸಿದ ಮೊಳಕಾಲ್ಮೂರಿನ ಡಿ.ಎಸ್.ಮಲ್ಲಿಕಾರ್ಜುನ (ಪ್ರಥಮ), ರೇಷ್ಮೆ ವಸ್ತ್ರದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಬಿಡಿಸಿದ ಕೊಳ್ಳೇಗಾಲದ ಪಿ. ಶ್ರೀನಿವಾಸ್ (ದ್ವಿತೀಯ). ಹತ್ತಿ ಕೈಮಗ್ಗ ವಿಭಾಗ: ಕಾಟನ್ ಸೀರೆಯಲ್ಲಿ ಭಾರತದ ನಕ್ಷೆ ಬಿಡಿಸಿದ ಚಿಕ್ಕೋಡಿಯ ಸಚಿನ ಬಾಹುಸಾಬ ತೇರದಾಳ (ಪ್ರಥಮ), ಕೊಂಡಿ ತಂತ್ರಜ್ಞಾನದೊಂದಿಗೆ ಇಳಕಲ್ ಮಾದರಿಯ ಸೀರೆಗೆ ಬೀಳಗಿಯ ಪಡಿಯಪ್ಪ ಗೋಕಾವಿ (ದ್ವಿತೀಯ). ಉಣ್ಣೆ ಕೈಮಗ್ಗ ವಿಭಾಗ: ಉಣ್ಣೆಯಲ್ಲಿ ರಾಷ್ಟ್ರಧ್ವಜ ರೂಪಿಸಿದ ಚಿಕ್ಕೋಡಿಯ ಶಂಕರ ಸಣ್ಣಕ್ಕಿ (ಪ್ರಥಮ).