Advertisement
ಜೂ. 3ರಂದು ಸಂಜೆ ಮೀರಾರೋಡು ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಪ್ರಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಶನೀಶ್ವರ ಜಯಂತಿ ಉತ್ಸವದಲ್ಲಿ ಧಾರ್ಮಿಕ ಸಂದೇಶ ನೀಡಿದ ಅವರು, ಶನಿಯು ತುಂಬಾ ಶಕ್ತಿಯುತವಾದ ನಿಷ್ಠುರ ಮಾತಿನ, ಸಹನೆ, ಶ್ರಮ, ಪ್ರಯತ್ನ ಅನುಭವಗಳ ಪ್ರತೀಕವಾಗಿ¨ªಾರೆ. ಮನುಷ್ಯ ತಾನು ಮಾಡಿದ ಕೆಟ್ಟ ಕರ್ಮದ ಫಲದ ಅನುಸಾರ, ಶನಿಯ ಸ್ಥಾನ ಕೆಟ್ಟದಾಗಿ ಕಷ್ಟಗಳು ಬರುತ್ತವೆ. ಸನ್ಮಾರ್ಗದಿಂದ ನಡೆದರೆ ಉತ್ತಮ ಫಲಪ್ರಾಪ್ತಿ ಯೊಂದಿಗೆ ದೇವರ ಸಾನ್ನಿಧ್ಯ ಹೊಂದಲು ಸಾಧ್ಯ ಎಂದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪೂರ್ಣ ನವಗ್ರಹ ಶನಿ ಯಾಗ, ಶನೈಶ್ವರ ಯಾಗ, ಸಾಮೂಹಿಕ ಭಜನೆ, ಸಾರ್ವಜನಿಕ ಶ್ರೀ ಶನಿ ಪೂಜೆ ಹಾಗೂ ಸನ್ನಿಧಿಯ ಪರಿವಾರ ದೇವರಿಗೆ ವಿಶೇಷ ಪೂಜೆ ನೆರವೇರಿತು. ರಾಘವೇಂದ್ರ ನಕ್ಷತ್ರಿ, ಗೋಪಾಲ್ ಭಟ್, ವಿಷ್ಣು ಪ್ರಸಾದ್ ಭಟ್, ಕಾರ್ತಿಕ್ ಉಪಾಧ್ಯಾಯ, ವಾಸುದೇವ ಭಟ್, ದೇವರಾಜ ನೆಲ್ಲಿ, ನಾಗರಾಜ ಪೋತಿ ಅವರು ವೈದಿಕ ತತ್ವದಡಿ ಸಹಕರಿಸಿದರು. ಕರಮ ಚಂದ್ರ ಗೌಡ ಮತ್ತಿತರರು ಭಕ್ತಾದಿಗಳ ವ್ಯವಸ್ಥೆಗಳಿಗೆ ಸಹಕರಿಸಿದರು. ತುಳು ಕನ್ನಡಿಗರು, ಪರಿಸರದ ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
Related Articles
Advertisement