ಮುಂಬಯಿ: ಮೀರಾರೋಡ್ ಪೂರ್ವದ ಮೀರಾಧಾಮ್ ಸೊಸೈಟಿಯ ಸಮೀಪದಲ್ಲಿರುವ ನ್ಯೂ ಪ್ಲೆಸೆಂಟ್ ಪಾರ್ಕ್‌ನಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಶ್ರೀ ಶನೀಶ್ವರ ಮಂದಿರದ 13ನೇ ವಾರ್ಷಿಕ ಶ್ರೀ ಶನಿಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ. 26 ರಂದು ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೊರಿವಲಿ ಶ್ರೀ ಕ್ಷೇತ್ರ ಸಾವರಾ³ಡಾದ ಶ್ರೀ ಶನಿಮಂದಿರದ ಪ್ರಧಾನ ಅರ್ಚಕ ಪೆರ್ಡೂರು ವಿಷ್ಣುಮೂರ್ತಿ ಅಡಿಗರ ಸಾರಥ್ಯದಲ್ಲಿ ಶನಿದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಶನಿದೇವರ ಕಲಶ ಪ್ರತಿಷ್ಠಾಪನೆ, ಶನಿಗ್ರಂಥ ಪಾರಾಯಣ, ಸದಸ್ಯರಿಂದ ಭಜನ ಕಾರ್ಯಕ್ರಮ, ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಗ್ರಂಥ ವಾಚಕರಾಗಿ ಅಚ್ಯುತ ಕೋಟ್ಯಾನ್, ಗೋಪಾಲ್ ದೇವಾಡಿಗ, ಉಷಾ ಶೆಟ್ಟಿಗಾರ್, ಅರ್ಥದಾರಿಗಳಾಗಿ ನಾರಾಯಣ ಶೆಟ್ಟಿ, ಪುರಂದರ ಶ್ರೀಯಾನ್ ಅವರು ಸಹಕರಿಸಿದರು. ರಾತ್ರಿ 7ರಿಂದ ಕಟೀಲು ಸದಾನಂದ ಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ಮೀರಾರೋಡ್‌ನ ಶ್ರೀ ಶನೀಶ್ವರ ಕೃಪಾಪೋಷಿತ ಮಕ್ಕಳ ಮೇಳ ಮತ್ತು ಶ್ರೀ ಭಾÅಮರಿ ಯಕ್ಷಕಲಾ ನಿಲಯದ ಬಾಲಪ್ರತಿಭೆಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ 9ರಿಂದ ಶನಿ ದೇವರ ಪ್ರಸಾದ ರೂಪದಲ್ಲಿ 3000ಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರಿಯ ಪಲ್ಲಕ್ಕಿ ಅಲಂಕಾರವನ್ನು ಮಾಡಿ ನಿಸ್ವಾರ್ಥ ಸೇವೆಗೈದ ಮೀರಾರೋಡ್‌ನ ಪುರುಷೋತ್ತಮ ಮಂಚಿ, ಗಿರೀಶ್ ಕರ್ಕೇರ ಮತ್ತು ಸದಾನಂದ ಅವರನ್ನು ಮಂದಿರದ ವತಿಯಿಂದ ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಮಂದಿರದ ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿ, ಇಂದಿರಾ ಶೆಟ್ಟಿ ಅವರನ್ನು ಮಂದಿರದ ವತಿಯಿಂದ ಶಾಲು ಹೊದೆಸಿ, ಕಾಣಿಕೆಯನ್ನಿತ್ತು ಗೌರವಿಸಿ ಸಮ್ಮಾನಿಸಲಾಯಿತು.
ಮಂದಿರದ ಗೌರವಾಧ್ಯಕ್ಷ ವಿನೋದ್ ವಾಘಾಸಿಯಾ, ಅಧ್ಯಕ್ಷೆ ವಿದ್ಯಾ ಕರ್ಕೇರ, ಉಪಾಧ್ಯಕ್ಷರಾದ ಗೋಪಾಲ್ ದೇವಾಡಿಗ, ಸಂಪತ್ ಶೆಟ್ಟಿ, ಕಾರ್ಯದರ್ಶಿ ಗುಣಕಾಂತ್ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿಗಳಾದ ಲೀಲಾ ಪೂಜಾರಿ, ಜಯಕರ ಶೆಟ್ಟಿ, ಕೋಶಾಧಿಕಾರಿ ಪುರಂದರ ಶ್ರೀಯಾನ್, ಜತೆ ಕೋಶಾಧಿಕಾರಿಗಳಾದ ಅಚ್ಯುತ ಕೋಟ್ಯಾನ್, ಸುಜಾತಾ ಶೆಟ್ಟಿ ಹಾಗೂ ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ದಾನಿಗಳು, ಸ್ಥಳೀಯ ರಾಜಕೀಯ ಧುರೀಣರು, ಸಮಾಜ ಸೇವಕರು, ತುಳು-ಕನ್ನಡಿಗ, ಅನ್ಯಭಾಷಿಕ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯದರ್ಶಿ ಗುಣಕಾಂತ ಶೆಟ್ಟಿ ಕರ್ಜೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಕರ್ಕೇರ, ಪುರಂದರ ಶ್ರೀಯಾನ್ ಅತಿಥಿಗಳಿಗೆ ಪ್ರಸಾದವನ್ನಿತ್ತು ಗೌರವಿಸಿದರು.