ಮುಂಬಯಿ: ಖಾರ್ ಪೂರ್ವದ ಜವಹಾರ್‌ನಗರದ ಪಹೇಲ್ವಾನ್ ಚಾಳ್‌ನಲ್ಲಿನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ 55ನೇ ವಾರ್ಷಿಕ ಶನೀಶ್ವರ ಮಹಾಪೂಜೆ ಇತ್ತೀಚೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಿತು.
ಸಮಿತಿಯ ಅರ್ಚಕ ನಾಗೇಶ್ ಸುವರ್ಣ ಮತ್ತು ಜತೆ ಅರ್ಚಕ ಯೋಗೇಶ್ ಅವರು ಪೂಜಾವಿಧಿ ಗಳನ್ನು ನೆರವೇರಿಸಿದರು. ಸಹಾಯಕ ಅರ್ಚಕ ರವೀಂದ್ರ ಕೋಟ್ಯಾನ್ ಮತ್ತು ವಿಮಲಾ ಕೋಟ್ಯಾನ್ ಯಜ ಮಾನಿಕೆಯಲ್ಲಿ ಗಣಪತಿ ಹೋಮ ಹಾಗೂ ಮಹಿಳಾ ಮಂಡಳಿಯ ಕಾರ್ಯದರ್ಶಿ ರೇವತಿ ಕೆ. ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ಯಜಮಾನಿಕೆಯಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ತಾರಾನಾಥ್ ಹೆಜ್ಮಾಡಿ ಮತ್ತು ಇಂದಿರಾ ತಾರಾನಾಥ್ ಯಜಮಾನಿಕೆಯಲ್ಲಿ ಕಲಶ ಪ್ರತಿಷ್ಠಾಪನೆ ಜರಗಿತು.
ಸಮಿತಿಯ ಕಾರ್ಯಾಧ್ಯಕ್ಷ ಆರ್. ಡಿ. ಕೋಟ್ಯಾನ್, ಉಪಕಾರ್ಯಾಧ್ಯಕ್ಷ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಭೋಜ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ ಕೆ. ಹೆಜ್ಮಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಸುವರ್ಣ, ಜತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಜತೆ ಕಾರ್ಯದರ್ಶಿ ರಮೇಶ್ ಪೂಜಾರಿ ಮತ್ತು ಮೋಹನ್ ಪೂಜಾರಿ ಇವರ ಅರ್ಥ ವಿವರಣೆ, ವಾಚನದಲ್ಲಿ ಶ್ರೀ ಶನಿದೇವರ ಸಂಪೂರ್ಣ ಗ್ರಂಥ ಪಾರಾಯಣ ನೆರವೇರಿತು.
ಸಮಿತಿಯ ಜತೆ ಕಾರ್ಯದರ್ಶಿ ರಮೇಶ್ ಪೂಜಾರಿ, ಮಹಿಳಾ ವಿಭಾಗದ ಗೌರವ ಕಾರ್ಯಾಧ್ಯಕ್ಷೆ ರಜನಿ ಆರ್. ಕೋಟ್ಯಾನ್, ಕಾರ್ಯಾಧ್ಯಕ್ಷೆ ಶೋಭಾ ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ಸರಸ್ವತಿ ಪೂಜಾರಿ, ಕಾರ್ಯದರ್ಶಿ ರೇವತಿ ಶೆಟ್ಟಿ, ಉಪ ಕಾರ್ಯದರ್ಶಿ ಶೋಭಾ ಸಾಲ್ಯಾನ್, ಯುವಕ ವೃಂದದ ಕಾರ್ಯಾಧ್ಯಕ್ಷ ವಿಜಯ ಸಾಲ್ಯಾನ್, ದೀಕ್ಷಿತ್ ಎಲ್. ದೇವಾಡಿಗ, ಸಚಿನ್ ಪೂಜಾರಿ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ಸ್ಥಳೀಯ ಕಚೇರಿ ಕಾರ್ಯಕರ್ತರು, ಭಕ್ತರಿಂದ ಭಜನ ಕಾರ್ಯಕ್ರಮ ನಡೆಯಿತು.
ಬಳಿಕ ಶನಿದೇವರ ಸಂಪೂರ್ಣ ಗ್ರಂಥ ಪಾರಾಯಣ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಶ್ರೀಧರ್ ಜೆ. ಪೂಜಾರಿ, ಅಧ್ಯಕ್ಷ ಶಂಕರ್ ಕೆ. ಸುವರ್ಣ, ಉಪಾಧ್ಯಕ್ಷ ದೇವೇಂದ್ರ ವಿ. ಬಂಗೇರ, ಜತೆ ಕಾರ್ಯದರ್ಶಿ ಜನಾರ್ಧನ ಸಾಲ್ಯಾನ್, ಜತೆ ಕೋಶಾಧಿಕಾರಿ ವಿನೋದ್ ಹೆಜ್ಮಾಡಿ, ಕೊಡುಗೈ ದಾನಿ ಉಮೇಶ್ ಕಾಪು, ಮಾಜಿ ನಗರ ಸೇವಕ ದೀಪಕ್ ಭೂತ್ಕರ್, ನಗರ ಸೇವಕಿ ಪ್ರಜ್ಞಾ ಭೂತ್ಕರ್, ಎಂಎನ್‌ಎಸ್‌ನ ಕಾರ್ಯಕರ್ತರಾದ ರೂಪೇಶ್ ಮಲಸುರೆ, ಕೊಠಡಿಯ ಮುಖ್ಯಾಧಿಕಾರಿ ಅಶೋಕ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್‌ನ ಜಯಂತಿ ಉಳ್ಳಾಲ್, ಶಂಕರ್ ಡಿ. ಪೂಜಾರಿ, ಧರ್ಮಪಾಲ್ ಅಂಚನ್, ವರದ ಉಳ್ಳಾಲ್, ಹರೀಶ್ ಜಿ. ಸಾಲ್ಯಾನ್, ಧನಂಜಯ ಶಾಂತಿ, ಹರೀಶ್ ಶಾಂತಿ ಹೆಜ್ಮಾಡಿ, ರವೀಂದ್ರ ಶಾಂತಿ ಪ್ರಸಾದ ಸ್ವೀಕರಿಸಿದರು. ಬಿಲ್ಲವರ ಅಸೋಸಿಯೇಶನ್‌ನ ಸೇವಾದಳದ ಗಣೇಶ್ ಪೂಜಾರಿ ಹಾಗೂ ತಂಡದವರ ಸಹಕಾರದಿಂದ ವಾರ್ಷಿಕ ಮಹಾಪೂಜೆ ಯಶಸ್ವಿಯಾಗಿ ನಡೆಯಿತು.
ನಾಳೆ ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮಾನ :
ಫೆ. 27ರಂದು ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಿತಿಯ ಸದಸ್ಯರಿಂದ ಹಾಗೂ ಸದಸ್ಯರ ಮಕ್ಕಳಿಂದ ಸಂಗೀತ ನೃತ್ಯ, ಸಭಾ ಕಾರ್ಯಕ್ರಮವು ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ. ಅಮೀನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ಶ್ರೀಧರ್ ಜೆ. ಪೂಜಾರಿ ಮತ್ತು ಶಾರದಾ ಪೂಜಾರಿ ದಂಪತಿಗೆ ಸಮ್ಮಾನ, ಬಹುಮಾನ ವಿತರಣೆ, ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಶನೀಶ್ವರ ಮಹಾತ್ಮೆ ವಿಕ್ರಮಾದಿತ್ಯ ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ ಕೆ. ಹೆಜ್ಮಾಡಿ ತಿಳಿಸಿದ್ದಾರೆ.