Advertisement

ನಮ್ಮ ಕುಟುಂಬದ ಸದಸ್ಯ: ಶೇನ್‌ ವಾರ್ನ್ ಗೆ ರಾಜಸ್ಥಾನ್‌ ನಮನ

11:33 PM Mar 05, 2022 | Team Udayavani |

ಜೈಪುರ: ಶುಕ್ರವಾರ ಹೃದಯಾಘಾತದಿಂದ ಹಠಾತ್ತನೆ ನಿಧನ ಹೊಂದಿದ ಲೆಜೆಂಡ್ರಿ ಸ್ಪಿನ್ನರ್‌ ಆಸ್ಟ್ರೇಲಿಯದ ಶೇನ್‌ ವಾರ್ನ್ ಅವರಿಗೆ ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿ ಭಾವುಕ ನಮನ ಸಲ್ಲಿಸಿದೆ.

Advertisement

“ಮಾಯಾಜಾಲಕ್ಕೆ ಅನ್ವರ್ಥ ನಾಮವೇ ಶೇನ್‌ ವಾರ್ನ್. ನಮ್ಮ ಪಾಲಿನ ಮೊದಲ ರಾಯಲ್‌. ನಮ್ಮ ಮೊದಲ ನಾಯಕ. ನಮ್ಮ ಕುಟುಂಬದ ಮೊದಲ ಸದಸ್ಯ. ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ ವ್ಯಕ್ತಿ. ತನ್ನ ಹಾದಿಯಲ್ಲಿ ಸಾಗಿ, ತನ್ನ ಮಾತಿನಂತೆಯೇ ನಡೆದ, ಅಂಡರ್‌ ಡಾಗ್‌ ಆಗಿದ್ದವರನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಮಹಾನ್‌ ಸಾಧಕ. ವಾರ್ನ್ ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯ ಹೊಂದಿದ್ದ ನಮ್ಮ ಪಾಲಿನ ಮಾರ್ಗದರ್ಶಕ’ ಎಂದು ರಾಜಸ್ಥಾನ್‌ ರಾಯಲ್ಸ್‌ ಕಂಬನಿ ಮಿಡಿದಿದೆ.

“ಈ ಆಘಾತಕಾರಿ ಸಂದರ್ಭದಲ್ಲಿ ನಮ್ಮ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅವರ ಮುಗುಳು ನಗು, ಅವರ ಬುದ್ಧಿವಂತಿಕೆ, ಜೀವನವನ್ನು ಸಂಪೂರ್ಣವಾಗಿ ಆನಂದಿಸುವ ಅವರ ಲವಲವಿಕೆ… ಎಲ್ಲವನ್ನೂ ಕಳೆದುಕೊಂಡ ಕ್ರಿಕೆಟ್‌ ಜಗತ್ತು ಬಡವಾಗಿದೆ.

ಜಗತ್ತಿನ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳಂತೆಯೇ ನಮ್ಮ ಹೃದಯ ಕೂಡ ಸಂಪೂರ್ಣ ಛಿದ್ರವಾಗಿದೆ’ ಎಂದು ರಾಜಸ್ಥಾನ್‌ ರಾಯಲ್ಸ್‌ ಮಾಲಕ ಮನೋಜ್‌ ಬದಾಲೆ ತಂಡದ ಪರವಾಗಿ ಸಂತಾಪ ಸೂಚಿಸಿದ್ದಾರೆ.

ಶೇನ್‌ ವಾರ್ನ್ ಆಡಿದ ಟಿ20 ಪಂದ್ಯಗಳ ಸಂಖ್ಯೆ 73. ಇದರಲ್ಲಿ 55 ಪಂದ್ಯಗಳನ್ನು ರಾಜಸ್ಥಾನ್‌ ರಾಯಲ್ಸ್‌ ಪರವಾಗಿಯೇ ಆಡಿದ್ದಾರೆ. ಇಲ್ಲಿ 57 ವಿಕೆಟ್‌ ಕೆಡವಿದ ಸಾಧನೆ ಇವರದು. ಡೆಕ್ಕನ್‌ ಚಾರ್ಜರ್ ವಿರುದ್ಧ 21 ರನ್ನಿಗೆ 4 ವಿಕೆಟ್‌ ಕಿತ್ತು, 2 ರನ್‌ ರೋಚಕ ಗೆಲುವು ತಂದಿತ್ತಿದ್ದರು. ಕೋಚ್‌, ಮೆಂಟರ್‌, ಮಾರ್ಗದರ್ಶಕನಾಗುವ ಮೂಲಕ ತಂಡದೊಂದಿಗಿನ ನಂಟನ್ನು ಮುಂದುವರಿಸಿಕೊಂಡು ಬಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next