ನವದೆಹಲಿ: ಆಸ್ಟ್ರೇಲಿಯದ ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರು ತನ್ನ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಹೆಸರಿಸಿದ್ದಾರೆ.
ಮಾಜಿ ನಾಯಕ ಮತ್ತು ಹಾಲಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಈ ತಂಡದ ನಾಯಕರನ್ನಾಗಿ ಹೆಸರಿಸಿದ್ದಾರೆ.
ಅಚ್ಚರಿಯೆಂದರೆ ಇದರಲ್ಲಿ ನವಜೋತ್ ಸಿಂಗ್ ಸಿಧು ಆರಂಭಿಕ ಬ್ಯಾಟ್ಸ್‌ಮನ್. ಇದರಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್‌ಗೆ ಸ್ಥಾನವಿಲ್ಲ. ಗಂಗೂಲಿಯನ್ನು ನಾಯಕನನ್ನಾಗಿ ಮಾಡಿದ ಪರಿಣಾಮ ವಿವಿಎಸ್ ಜಾಗ ಪಡೆದಿಲ್ಲ.
ವಾರ್ನೆ ತನ್ನ ಸಾರ್ವಕಾಲಿಕ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸ್ಥಾನ ಪಡೆದಿದ್ದಾರೆ.
ತಂಡ: ವಿರೇಂದ್ರ ಸೆಹ್ವಾಗ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ( ನಾ), ಕಪಿಲ್ ದೇವ್, ಹರ್ಭಜನ್ ಸಿಂಗ್, ನಯನ್ ಮೋಂಗಿಯಾ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್.