Advertisement

Sania- Shami: ಸಾನಿಯಾ ಮಿರ್ಜಾ ಜತೆ ಶಮಿ ವಿವಾಹ?: ಕೊನೆಗೂ ಮೌನ ಮುರಿದ ಸಾನಿಯಾ ತಂದೆ

10:55 AM Jun 21, 2024 | Team Udayavani |

ಹೈದರಾಬಾದ್: ಕ್ರಿಕೆಟರ್ ಮೊಹಮ್ಮದ್ ಶಮಿ ಮತ್ತು ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಭಾರತ ಕಂಡ ಶ್ರೇಷ್ಠ ಕ್ರೀಡಾಪಟುಗಳು. ತಮ್ಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರು. 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಬಳಿಕ ಗಾಯದ ಕಾರಣದಿಂದ ವಿಶ್ರಾಂತಿಯಲ್ಲಿರುವ ಶಮಿ ಅವರು ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಕೇಳಿ ಬರುತ್ತಿದೆ.

Advertisement

ಸಾನಿಯಾ ಮಿರ್ಜಾ ಅವರು ಈ ಹಿಂದೆ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಅವರ ವಿವಾಹ ಮುರಿದುಬಿದ್ದಿತ್ತು. ವಿಚ್ಛೇದನದ ಬಳಿಕ ಮಲಿಕ್ ಅವರು ಸನಾ ಜಾವೇದ್ ಅವರನ್ನು ಮದುವೆಯಾಗಿದ್ದರು.

ಕ್ರಿಕೆಟರ್ ಮೊಹಮ್ಮದ್ ಶಮಿ ಅವರು ತಮ್ಮ ಪತ್ನಿ ಹಸೀನ್ ಜಹಾನ್ ಅವರಿಂದ ಇತ್ತೀಚೆಗೆ ದೂರವಾಗಿದ್ದರು.

ಶಮಿ- ಸಾನಿಯಾ ಮದುವೆ ವದಂತಿಗಳ ಬಗ್ಗೆ ಸಾನಿಯಾ ತಂದೆ ಇಮ್ರಾನ್ ಇದೀಗ ಮಾತನಾಡಿದ್ದಾರೆ. “ಇದೆಲ್ಲಾ ಸುಳ್ಳು, ಅವಳು ಇದುವರೆಗೂ ಶಮಿಯನ್ನು ಭೇಟಿಯೂ ಆಗಿಲ್ಲ” ಎಂದಿದ್ದಾರೆ.

Advertisement

ಸಾನಿಯಾ ಮಿರ್ಜಾ ಅವರು ಕ್ರಿಕೆಟಿಗ ಪತಿ ಶೋಯೆಬ್ ಮಲಿಕ್ ಅವರೊಂದಿಗೆ ಬೇರ್ಪಟ್ಟ ಸುಮಾರು 5 ತಿಂಗಳ ನಂತರ ಇತ್ತೀಚೆಗೆ ಹಜ್‌ ಯಾತ್ರೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next