Advertisement

ಶಮಿ ಪತ್ನಿಯಿಂದ ಹಲ್ಲೆ ಆರೋಪ​​​​​​​

06:25 AM Mar 08, 2018 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಖ್ಯಾತ ವೇಗದ ಬೌಲರ್‌ ಮೊಹಮ್ಮದ್‌ ಶಮಿ ವಿರುದ್ಧ ಪತ್ನಿ ಜಹಾನ್‌ ಗೃಹ ಹಿಂಸೆ ಮತ್ತು ವಂಚನೆ ಆರೋಪ ಮಾಡಿದ್ದಾರೆ. ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಜಹಾನ್‌ ಸರಣಿ ಆರೋಪ ಮಾಡಿರುವ ಪರಿಣಾಮ ಮೊಹಮ್ಮದ್‌ ಶಮಿ ಬಿಸಿಸಿಐನ ನೂತನ ಗುತ್ತಿಗೆಯಿಂದ ಹೊರಬಿದ್ದಿದ್ದಾರೆನ್ನಲಾಗಿದೆ.

Advertisement

ಆದರೆ ಜಹಾನ್‌ ಇನ್ನೂ ಈ ಬಗ್ಗೆ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿಲ್ಲ. ಪತ್ನಿಯ ಎಲ್ಲ ಆರೋಪಗಳನ್ನು ಶಮಿ ನಿರಾಕರಿಸಿದ್ದಾರೆ.

ನನ್ನ ಪತಿ ಮೊಹಮ್ಮದ್‌ ಬೆಂಗಳೂರು ಹುಡುಗಿಯೊಂದಿಗೆ ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡು ತ್ತಾರೆ, ಅವರ ಬಿಎಂಡಬ್ಲೂé ಕಾರ್‌ನಲ್ಲಿ ಗರ್ಭನಿರೋಧಕಗಳು ಸಿಕ್ಕಿವೆ. ಅಷ್ಟು ಮಾತ್ರವಲ್ಲ ಅವರ ತಾಯಿ, ಸಹೋದರ ನನಗೆ ಮುಂಜಾನೆ 3 ಗಂಟೆವರೆಗೆ ಹಿಂಸೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಮೊಹಮ್ಮದ್‌ ಶಮಿ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ.

ಅವರು ದಕ್ಷಿಣ ಆμÅಕಾ ಪ್ರವಾಸದಿಂದ ಮರಳಿದ ನಂತರ ನನಗೆ ವಿಪರೀತ ಹೊಡೆದಿದ್ದಾರೆ. ಇದನ್ನೆಲ್ಲ ಬಹಳ ಕಾಲದಿಂದ ಅವರು ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ನನ್ನ ಮಗಳು ಐರಾ ಕಾರಣಕ್ಕೆ ಸಹಿಸಿಕೊಂಡಿದ್ದೆ. ಇನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನಿಸಿದ್ದರಿಂದ ದೂರು ನೀಡುವ ಯೋಚನೆ ಮಾಡಿದ್ದೇನೆ ಎಂದಿದ್ದಾರೆ. 2014ರಲ್ಲಿ ಶಮಿ ಅವರು ಜಹಾನ್‌ರನ್ನು ವಿವಾಹವಾಗಿದ್ದಾರೆ. ಅವರು ಇದುವರೆಗೆ 30 ಟೆಸ್ಟ್‌ ಆಡಿ 110 ವಿಕೆಟ್‌ ಗಳಿಸಿದ್ದಾರೆ. 50 ಏಕದಿನ ಆಡಿ 91 ವಿಕೆಟ್‌, 7 ಟಿ20ಯಲ್ಲಿ 8 ವಿಕೆಟ್‌ ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next