Advertisement

ಪಾಕ್‌ಗೆ ಮತ್ತೆ ಮುಖಭಂಗ

06:05 AM Sep 17, 2017 | Team Udayavani |

ವಿಶ್ವಸಂಸ್ಥೆ: ತನ್ನ ನೆಲದಲ್ಲಿ ರಕ್ತಪಿಪಾಸುಗಳನ್ನು ಪೋಷಿಸಿ ಬೆಳೆಸುತ್ತಿದ್ದರೂ ಮತ್ತೂಂದು ದೇಶದ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸುವ ಪಾಕಿಸ್ಥಾನಕ್ಕೆ ಶನಿವಾರ ಭಾರತವು ಕಟು ಪದಗಳ ಮೂಲಕವೇ ನೈತಿಕತೆಯ ಪಾಠ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾವಿಸಿ, ಚಪ್ಪಾಳೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ಪಾಕಿಸ್ಥಾನವನ್ನು ಭಾರತವು ಸರಿಯಾಗಿಯೇ ಝಾಡಿಸಿದೆ.

Advertisement

“ನಮ್ಮ ಆಂತರಿಕ ವಿಚಾರದಲ್ಲಿ ಎಳ್ಳಷ್ಟೂ ಹಸ್ತಕ್ಷೇಪ ಮಾಡುವ ಅಧಿಕಾರ ನಿಮಗಿಲ್ಲ. ಭವಿಷ್ಯದಲ್ಲಿ ಇಂಥ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಿ’ ಎಂದು ಹೇಳಿ ವಿಶ್ವಸಮುದಾಯದ ಮುಂದೆಯೇ ಪಾಕಿಸ್ಥಾನಕ್ಕೆ ಭಾರತ ತೀವ್ರ ಮುಖಭಂಗ ಮಾಡಿದೆ.

ಇದು ನಡೆದದ್ದು ಜಿನೇವಾದ ವಿಶ್ವಸಂಸ್ಥೆ ಕಚೇರಿಯಲ್ಲಿ. ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾದ ಇಸ್ಲಾ ಮಿಕ್‌ ಸಹಕಾರ ಸಂಘ (ಒಐಸಿ)ದ ಪರ ಪಾಕ್‌ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಹಿಂಸಾಚಾರವನ್ನು ಪ್ರಸ್ತಾ ವಿಸಿತ್ತು. ಕಾಶ್ಮೀರದಲ್ಲಿನ ಸ್ವದೇಶಿ ಚಳವಳಿಗೆ ಭಾರತ ತೊಂದರೆ ಉಂಟುಮಾಡುತ್ತಿದೆ. ಅಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಿದ್ದು, ಅದನ್ನು ತಡೆಯುವ ಅಗತ್ಯವಿದೆ ಎಂದೆಲ್ಲ  ಆರೋಪಗಳ ಪಟ್ಟಿ ಮುಂದಿಟ್ಟು ಭಾರತವನ್ನು ಹೀಗಳೆಯಲು ಯತ್ನಿಸಿತ್ತು.

ಇದಕ್ಕೆ “ಭಾರತದ ಪ್ರತಿಕ್ರಿಯಿಸುವ ಹಕ್ಕು’ ನಿಯಮದಡಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರ ಕಚೇರಿಯ ಕಾರ್ಯದರ್ಶಿ ಸುಮಿತ್‌ ಸೇs…, “ಜಮ್ಮು ಮತ್ತು ಕಾಶ್ಮೀರ ಎನ್ನುವುದು ಭಾರತದ ಅವಿಭಾಜ್ಯ ಹಾಗೂ ಎಂದೂ ಪ್ರತ್ಯೇಕಿಸಲಾಗದ ಅಂಗ. ಹೀಗಾಗಿ, ಅಲ್ಲಿನ ಎಲ್ಲ ಸಂಗತಿಗಳೂ ನಮ್ಮ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡಲು ನೀವ್ಯಾರು’ ಎಂದು ಕೇಳುವ ಮೂಲಕ ಪಾಕಿಸ್ಥಾನದ ಬಾಯಿ ಮುಚ್ಚಿಸಿದರು. ಅಲ್ಲದೆ, “ಒಐಸಿ ನೀಡಿರುವ ಹೇಳಿಕೆಯಲ್ಲಿ ಸತ್ಯಕ್ಕೆ ದೂರವಾದ ಅಂಶಗಳೇ ತುಂಬಿವೆ. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಹಾದಿ ತಪ್ಪಿಸುವಂಥ ಉಲ್ಲೇಖಗಳನ್ನು ಮಾಡಲಾಗಿದೆ. ಇವೆಲ್ಲವನ್ನೂ ಭಾರತವು ಖಂಡತುಂಡವಾಗಿ ನಿರಾಕರಿಸುತ್ತದೆ. ಅಷ್ಟಕ್ಕೂ, ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಯಾವ ಅಧಿಕಾರವೂ ಒಐಸಿ ಗಿಲ್ಲ. ಈಗ ಮಾತ್ರವಲ್ಲ, ಭವಿಷ್ಯದಲ್ಲೂ ಇಂತಹ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಿ ಎಂದು ನಾವು ಒಐಸಿಗೆ ಹೇಳಬಯಸುತ್ತೇವೆ’ ಎಂದರು.

ಏನಿದು ಒಐಸಿ?: ಇಸ್ಲಾಮಿಕ್‌ ಸಹಕಾರ ಸಂಸ್ಥೆ (ಆರ್ಗನೈಸೇಷನ್‌ ಆಫ್ ಇಸ್ಲಾಮಿಕ್‌ ಕೋ- ಆಪರೇಷನ್‌) ಎನ್ನುವುದು 57 ರಾಷ್ಟ್ರಗಳು ಸೇರಿ ರಚಿಸಿದ ಒಂದು ಗುಂಪು. ಇದರ ಸದಸ್ಯ ರಾಷ್ಟ್ರಗಳ ಪೈಕಿ ಪಾಕಿಸ್ಥಾನವೂ ಒಂದಾಗಿದೆ.

Advertisement

ಪಾಕಿಸ್ಥಾನದ ಆರೋಪ ಏನಾಗಿತ್ತು ?
– ಕಾಶ್ಮೀರದ ಸ್ವದೇಶಿ ಚಳವಳಿಗೆ ಕಪ್ಪು ಚುಕ್ಕೆ ತರಲು ಭಾರತ ಯತ್ನಿಸುತ್ತಿದೆ
– ಬಹುಸಂಖ್ಯಾತ ಕಾಶ್ಮೀರಿಗರನ್ನು ಅಲ್ಪಸಂಖ್ಯಾಕರಿರುವ ಪ್ರದೇಶಕ್ಕೆ ಬದಲಿಸುವ ಮೂಲಕ ಭಾರತ ಸರಕಾರವು ಕಾಶ್ಮೀರದ ಜನಸಂಖ್ಯಾ ಸ್ಥಿತಿಯನ್ನೇ ಬದಲಿಸಲು ಹೊರಟಿದೆ
– ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಡಿವಾಣ ಹಾಕಬೇಕು
– ಎಲ್‌ಒಸಿಯಲ್ಲಿ ಭಾರತೀಯ ಸೇನಾ ಪಡೆ ಕದನ ವಿರಾಮ ಉಲ್ಲಂ ಸುತ್ತಿದ್ದು, ಇದನ್ನು ತಡೆಯಬೇಕು

ಭಾರತದ ಪ್ರತಿಕ್ರಿಯೆಯೇನು?
– ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಪ್ರತ್ಯೇಕಿಸಲು ಅಸಾಧ್ಯವಾದ ಅಂಗ
– ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಯಾವ ಅಧಿಕಾರವೂ ಒಐಸಿಗಿಲ್ಲ
– ಒಐಸಿ ಹೇಳಿಕೆಯಲ್ಲಿರುವುದು ಸುಳ್ಳು ಮತ್ತು ಹಾದಿ ತಪ್ಪಿಸುವ ಅಂಶಗಳೇ
– ಭವಿಷ್ಯದಲ್ಲಿ ಇಂತಹ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಿ

ಇಬ್ಬರು ಉಗ್ರರ ಹತ್ಯೆ
ಶ್ರೀನಗರ
: ಪಾಕ್‌ ಕಡೆಯಿಂದ ಕಾಶ್ಮೀರದೊಳಗೆ ನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಿರುವ ಭಾರತೀಯ ಸೇನೆ, ಒಳನುಸುಳುವಿಕೆ ಪ್ರಯತ್ನವನ್ನು ತಡೆದಿದೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್‌ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡ ಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next