Advertisement
ಮುಖ್ಯವಾಗಿ ದಾವಣಗೆರೆಯಲ್ಲಿ ಪಾರ್ಕ್, ಬಸ್ ನಿಲ್ದಾಣ, ಜಿ.ಪಂ ಸಭಾಂಗಣ ಮತ್ತಿತರ ಸರಕಾರಿ ಕಟ್ಟಡಗಳಿಗೆ ಸ್ಥಳೀಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರು ಇಟ್ಟಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಿಲಾಗಿದ್ದು, ಅದರಂತೆ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ದಾವಣಗೆರೆ ಜಿಲ್ಲಾಧಿಕಾರಿ, ದಾವಣಗೆರೆ ನಗರ ಸಭೆ, ದಾವಣಗೆರೆ ಜಿಲ್ಲಾ ಪಂಚಾಯತ್‌ಗೂ ನೋಟಿಸ್ ಜಾರಿ ಮಾಡಲಾಯಿತು.
Related Articles
Advertisement
ಅದರಂತೆ, ಹೈಕೋರ್ಟ್ 2012ರಲ್ಲಿ ನೀಡಿದ ಆದೇಶ ಆಧರಿಸಿ ಹಾಗೂ ಅರ್ಜಿದಾರರು 2023ರ ಜುಲೈ 25ರಂದು ಸಲ್ಲಿಸಿರುವ ಮನವಿಯಂತೆ ಸರ್ಕಾರದ ಅನುದಾನದಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಇನ್ನೂ ಜೀವಂತವಾಗಿರುವ ರಾಜಕಾರಣಿಗಳಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರು ಇಟ್ಟಿರುವುದನ್ನು ತೆರವುಗೊಳಿಸಲು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು
ಅರ್ಜಿಯಲ್ಲಿ ಏನಿದೆ?ದಾವಣಗೆರೆ ನಗರಸಭೆಯು ಸಾರ್ವಜನಿಕರ ಹಣದಿಂದ ಹಳೆ ಪುಣೆ-ಬೆಂಗಳೂರು ರಸ್ತೆಯಲ್ಲಿ ಕಟ್ಟಿರುವ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಬಸ್ ಸ್ಟಾಂಡ್’ ಎಂದು ಹೆಸರಿಡಲಾಗಿದೆ. ಕುಂದವಾಡ ಗ್ರಾಮದಲ್ಲಿರುವ ಕುಂದವಾಡ ಕೆರೆ ಸಹ ದಾವಣಗೆರೆ ನಗರಸಭೆ ನಿರ್ಮಾಣ ಮಾಡಿ, ನಿರ್ವಹಣೆ ಮಾಡುತ್ತಿದೆ. ದಾವಣಗೆರೆ ನಗರದ ಕುಡಿಯುವ ನೀರಿಗಾಗಿ ಬಳಸಲಾಗಿರುವ ಈ ಕೆರೆಯ ಹೆಸರನ್ನು ಎಸ್.ಎಸ್. ಮಲ್ಲಿಕಾರ್ಜುನ ಸಾಗರ’ ಎಂದು ಇಡಲಾಗಿದೆ. ಜಿ.ಪಂ ಸಭಾಂಗಣಕ್ಕೆ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣ ಎಂದು ಹೆಸರಿಡಲಾಗಿದೆ. ನಗರಸಭೆಯ ಸಭಾಂಗಣಕ್ಕೆ ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣ’ ಎಂದು ನಾಮಕರಣ ಮಾಡಲಾಗಿದೆ. ನಗರದಲ್ಲಿರುವ ಪಾರ್ಕ್‌ಗೆ ಡಾ. ಶಾಮನೂರು ಶಿವಶಂಕರಪ್ಪ ಉದ್ಯಾನವನ’ ಎಂದು ಹೆಸರಿಡಲಾಗಿದೆ. ಹುಡ್ಕೊà ಬಡಾವಣೆಗೆ ಎಸ್‌ಎಸ್‌ಎಂ ನಗರ’ (ಡಾ. ಶಾಮನೂರು ಶಿವಶಂಕರಪ್ಪ ನಗರ ಎಂದು ಹೆಸರಿಡಲಾಗಿದೆ. ಇದು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.