Advertisement

ಶಾಮನೂರು ಲಿಂಗಾಯತರೋ, ವೀರಶೈವರೋ

11:49 AM Jan 13, 2018 | Team Udayavani |

ಬೆಂಗಳೂರು: ವೀರಶೈವ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಲಿಂಗಾಯತರೋ, ವೀರಶೈವರೋ ಎಂದು ದಾಖಲೆ ಬಿಡುಗಡೆ ಮಾಡಲಿ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಸವಾಲು ಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀರಶೈವ ಮಹಾಸಭೆಯಲ್ಲಿ 17 ಸಾವಿರ ಸದಸ್ಯರಿದ್ದಾರೆ.

Advertisement

ಅವರ ಜನ್ಮ ಪ್ರಮಾಣ ಪತ್ರಗಳ ದಾಖಲೆ ಬಿಡುಗಡೆ ಮಾಡಲಿ, ಅವರು ಲಿಂಗಾಯತರೋ ಅಥವಾ ವೀರಶೈವ ಎಂದು ದಾಖಲೆ ನೀಡಿದ್ದಾರೊ ಬಹಿರಂಗಪಡಿಸಲಿ ಎಂದರು. ನಮ್ಮ ತಂದೆ ತಾಯಿ ಲಿಂಗಾಯತರೇ, ನಾನೂ ಲಿಂಗಾಯತನೇ, ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ. ನಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next