ಮುಂಬಯಿ: ಕುಮಾರ ಕ್ಷತ್ರಿಯ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ 2019-2022ರ ನೂತನ ಪದಾಧಿಕಾರಿಗಳ ಆಯ್ಕೆಯ ಸಲುವಾಗಿ ಒಂದು ಜಂಟಿ ಸಭೆಯು ಸಂಘದ ಸಮಿತಿ ಸಭೆಯೊಂದಿಗೆ ಎ.28ರಂದು ಬೆಳಗ್ಗೆ 11.30ಕ್ಕೆ ಸರಿಯಾಗಿ ಅಂಧೇರಿ ಪೂರ್ವದ ಚಕಾಲಾದಲ್ಲಿರುವ ಸಾಯಿ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಜರಗಿತು. ಕೆ. ಎಂ. ರಾವ್ ಅವರ ಸಹಕಾರದಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಎಂ. ಡಿ. ರಾವ್ ಅವರು ಹೊಸದಾಗಿ ಆಯ್ಕೆಯಾದ ಎಲ್ಲಾ ಮಹಿಳಾ ವಿಭಾಗದವರಿಗೆ ಸ್ವಾಗತ ಕೋರುತ್ತಾ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ರಾವ್ ಅವರಿಗೆ ಮುಂದಿನ ಕಾರ್ಯಕ್ರಮವನ್ನು ಮುಂದುವರಿಸಲು ಆಮಂತ್ರಿಸಿದರು. ಶಾಲಿನಿ ರಾವ್ ಅವರ ಅಧ್ಯಕ್ಷತೆಯಲ್ಲಿ 2019 ರಿಂದ 2022 ಸಾಲಿನ ಮಹಿಳಾ ವಿಭಾಗಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತಗಳಿಂದ ಸಭೆಯಲ್ಲಿ ಆಯ್ಕೆಮಾಡಲಾಯಿತು. ನೂತನ ಕಾರ್ಯಾಧ್ಯಕ್ಷೆಯಾಗಿ ಶಾಲಿನಿ ಮಿಲಿಂದ್ ರಾವ್, ಉಪಾಧ್ಯಕ್ಷೆಯಾಗಿ ಉಮಾ ಎಸ್. ರಾವ್, ಕಾರ್ಯ ದರ್ಶಿಯಾಗಿ ಕವಿತಾ ರೋಹನ್, ಜತೆ ಕಾರ್ಯ ದರ್ಶಿಯಾಗಿ ಕಲ್ಪನಾ ಎಸ್. ರಾವ್, ಕೋಶಾಧಿಕಾರಿ ಯಾಗಿ ದಿವ್ಯಾ ಕಲ್‌ನಾಡ್, ಸಲಹೆಗಾರ್ತಿಯಾಗಿ ಪ್ರಭಾ ರಾವ್ ಅವರನ್ನು ನೇಮಿಸಲಾಯಿತು. ಸಭೆಯಲ್ಲಿ ಸದಸ್ಯೆಯರಾದ ವಿಶಾಲಾಕ್ಷಿ ಚಂದ್ರಗಿರಿ ಹಾಗೂ ಇಂದುಮತಿ ರಾವ್ ಉಪಸ್ಥಿತರಿದ್ದರು. ಕುಮಾರ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಎಂ. ಡಿ.ರಾವ್, ಉಪಾಧ್ಯಕ್ಷ ರವಿ ಚಂದ್ರಗಿರಿ, ಕಾರ್ಯದರ್ಶಿ ಶಂಕರ ಜಿ. ರಾವ್, ಜತೆ ಕಾರ್ಯದರ್ಶಿ ಉಮಾನಾಥ್ ರಾವ್, ಕೋಶಾಧಿ
ಕಾರಿ ಶಾಂತರಾಮ್ ಜೆ. ಮಾಂಗಾಡ್, ಸಲಹೆಗಾರ ಬಿ. ಎಸ್.
ರಾವ್, ಸಮಿತಿಯ ಸದಸ್ಯರಾದ ರವಿ ಎಸ್. ಕಲ್‌ನಾಡ್, ಕೆ. ಎಂ.
ರಾವ್ ಮತ್ತು ವಿಕ್ಕಿ ಜಿ. ರಾವ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಹಲವಾರು ಹೊಸ ಯೋಜನೆಗಳ ರೂಪುರೇಷೆ ತಯಾರಿಸಲಾಯಿತು. ಕೊನೆಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ರಾವ್ ಹಾಗೂ ಸಂಘದ ಅಧ್ಯಕ್ಷರಾದ ಎಂ. ಡಿ. ರಾವ್ ಅವರು ಧನ್ಯವಾದ ಅರ್ಪಿಸಿದರು. ಭೋಜನದೊಂದಿಗೆ ಸಭೆಯು ಸಂಪನ್ನಗೊಂಡಿತು.