Advertisement

ಶ್ರೀರಾಮನ ಮೂರ್ತಿ ಕೆತ್ತನೆಗೆ ನೇಪಾಳದ ಸಾಲಿಗ್ರಾಮ ಶಿಲೆ

06:30 PM Jan 30, 2023 | Team Udayavani |

ಅಯೋಧ್ಯಾ:ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ. ಇದಕ್ಕಾಗಿ ಮೂರು ಅಡಿ ಎತ್ತರದ ಶ್ರೀರಾಮ, ಸೀತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಇವನ್ನು ನೇಪಾಳದ ಕಾಳಿಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗುವುದು. ತಲಾ 25 ಮತ್ತು 15 ಟನ್‌ ತೂಕವಿರುವ ಈ ಕಲ್ಲುಗಳನ್ನು ಜ.30ರಂದು ನೇಪಾಳದಿಂದ ಭಾರತಕ್ಕೆ ಕಳುಹಿಸಲಾಗಿದೆ.

Advertisement

ನೇಪಾಳ ಸರ್ಕಾರ ಸ್ವತಃ ಆಸಕ್ತಿ ವಹಿಸಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ಶ್ರೀರಾಮ ವಿಷ್ಣುವಿನ ಅವತಾರ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮವನ್ನು ವಿಷ್ಣುವೆಂದೇ ಭಾವಿಸಿ ಪೂಜಿಸಲಾಗುತ್ತದೆ. ಹೀಗಾಗಿ ಈ ನದಿಯ ಶಿಲೆಯನ್ನು ಬಳಸಲು ನಿರ್ಧರಿಸಲಾಯಿತು. ಅಯೋಧ್ಯಾ ಶ್ರೀರಾಮನ ದೇವಸ್ಥಾನದಲ್ಲಿ ಮೂಲ ರಾಮಲಲ್ಲಾ ವಿಗ್ರಹಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಅದರ ಜೊತೆಗೆ ಮುಖ್ಯಮಂದಿರದಲ್ಲಿ ಸಾಲಿಗ್ರಾಮ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ.

ಜೂನ್‌ಗೆ ಅಯೋಧ್ಯಾ ಅಂ.ರಾ. ವಿಮಾನನಿಲ್ದಾಣ: ಒಂದು ಕಡೆ ರಾಮಮಂದಿರ ನಿರ್ಮಾಣ ಭರದಿಂದ ಸಾಗಿರುವಂತೆಯೇ, ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಈ ವರ್ಷ ಜೂನ್‌ ಹೊತ್ತಿಗೆ ಮುಗಿಸಲು ಯೋಗಿ ಆದಿತ್ಯನಾಥ್‌ ಸರ್ಕಾರ ತೀವ್ರ ಆಸಕ್ತಿವಹಿಸಿಎ. ಕಾಮಗಾರಿಗಳು ಅಷ್ಟೇ ತ್ವರಿತವಾಗಿ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next