ಮಂಗಳೂರು: ಶಕ್ತಿನಗರದ ಕಾರ್ಮಿಕ ಕಾಲನಿ ರಸ್ತೆಯ ಕೆಎಚ್‌ಬಿ ಕಾಲನಿಯ ಉದಯ್ ಕೇಶವ್ ಎಂಬುವರ ಮನೆಗೆ ಕಳ್ಳರು ನುಗ್ಗಿ 3,47,500 ರೂ. ಮೌಲ್ಯದ ಸೊತ್ತು ಮತ್ತು ನಗದನ್ನು ಕಳವು ಮಾಡಲಾಗಿದೆ.
ಮನೆಯವರು ಮನೆಗೆ ಬೀಗ ಹಾಕಿ ಪೂಜಾ ಕಾರ್ಯಕ್ರಮವೊಂದಕ್ಕೆ ಕುಂಬ್ಳೆಗೆ ತೆರಳಿದ್ದು, ಜ.28ರ ಸಂಜೆ 4.30ರಿಂದ 29ರ ಮಧ್ಯಾಹ್ನ 12.30ರ ನಡುವೆ ಕಳ್ಳತನ ನಡೆದಿದೆ. ಕಳ್ಳರು ಮನೆಯ ಮೇಲಿನ ಮಹಡಿಯ ಬಾಲ್ಕನಿಯ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ಒಳಪ್ರವೇಶಿಸಿದ್ದಾರೆ.
ನೆಲ ಅಂತಸ್ತಿನ ಕೋಣೆಯ ಸ್ಟೀಲ್ ಕಪಾಟ್ ಲಾಕರನ್ನು ಮುರಿದು 2,50,000 ರೂ., ನಗದು ಹಾಗೂ ಇನ್ನೊಂದು ಕೋಣೆಯಲ್ಲಿದ್ದ ಲಾಕರ್ ಮುರಿದು 60,000 ರೂ. ಮೌಲ್ಯದ ಎರಡು ಕರಿಮಣಿ ಸರ, 36,000 ರೂ. ಮೌಲ್ಯದ ಮೂರು ಜತೆ ಬೆಂಡೋಲೆ, ಹಾಗೂ 1500 ರೂ. ಮೌಲ್ಯದ ಲೇಡಿಸ್ ವಾಚನ್ನು ಕಳವು ಮಾಡಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಡಿಡಿಎಲ್‌ಜೆಯಲ್ಲಿ ಸಚಿವ ಜೈಶಂಕರ್ ನಟನೆ: ಜೈರಾಮ್ ರಮೇಶ್