Advertisement

ಶಕಿಬ್‌, ಸ್ಟಫಾನಿ ತಿಂಗಳ ಕ್ರಿಕೆಟಿಗರು

09:35 PM Aug 11, 2021 | Team Udayavani |

ದುಬೈ: ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಮತ್ತು ವೆಸ್ಟ್‌ ಇಂಡೀಸ್‌ ವನಿತಾ ತಂಡದ ನಾಯಕಿ ಸ್ಟಫಾನಿ ಟೇಲರ್‌ ಜುಲೈ ತಿಂಗಳ ಐಸಿಸಿ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.

Advertisement

ಶಕಿಬ್‌ ಅಲ್‌ ಹಸನ್‌ ಎಲ್ಲ 3 ಮಾದರಿಗಳಲ್ಲೂ ಮಿಂಚಿ ಜಿಂಬಾಬ್ವೆ ವಿರುದ್ಧ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನೂತನ ಟಿ20 ಆಲ್‌ರೌಂಡರ್‌ ರ್‍ಯಾಂಕಿಂಗ್‌ನಲ್ಲಿ ಶಕಿಬ್‌ ಇತ್ತೀಚೆಗಷ್ಟೇ ನಂ.1 ಸ್ಥಾನ ಅಲಂಕರಿಸಿದ್ದರು. ಇವರೊಂದಿಗೆ ರೇಸ್‌ನಲ್ಲಿದ್ದ ಉಳಿದಿಬ್ಬರು ಕ್ರಿಕೆಟಿಗರೆಂದರೆ ಆಸ್ಟ್ರೇಲಿಯದ ಮಿಚೆಲ್‌ ಮಾರ್ಷ್‌ ಮತ್ತು ವೆಸ್ಟ್‌ ಇಂಡೀಸ್‌ನ ಹೇಡನ್‌ ವಾಲ್ಶ್ ಜೂನಿಯರ್‌.

ಸ್ಟಫಾನಿ ಟೇಲರ್‌ ಜುಲೈಯಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಏಕದಿನ ಹಾಗೂ ಟಿ20 ಸರಣಿ ಗೆಲುವು ತಂದಿತ್ತ ನಾಯಕಿಯೆನಿಸಿದ್ದರು. ತಿಂಗಳ ಆಟಗಾರ್ತಿಯ ರೇಸ್‌ನಲ್ಲಿ ಇವರು ವಿಂಡೀಸ್‌ನವರೇ ಆದ ಹ್ಯಾಲಿ ಮ್ಯಾಥ್ಯೂಸ್‌ ಮತ್ತು ಪಾಕಿಸ್ಥಾನದ ಫಾತಿಮಾ ಸನಾ ಅವರನ್ನು ಹಿಂದಿಕ್ಕಿದರು.

Advertisement

Udayavani is now on Telegram. Click here to join our channel and stay updated with the latest news.

Next