ಢಾಕಾ: ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಇದೀಗ ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಢಾಕಾ ಲೀಗ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅಂಪೈರ್ ವಿರುದ್ಧ ತನ್ನ ಉಗ್ರ ರೂಪ ತೋರಿದ್ದು, ವಿಕೆಟ್ ಗಳನ್ನು ಕಿತ್ತೆಸಿದಿದ್ದಾರೆ.
ಬಾಂಗ್ಲಾದ ದೇಶಿಯ ಕೂಟ ಢಾಕಾ ಲೀಗ್ ನಲ್ಲಿ ಮೊಹಮ್ಮದಿನ್ ಸ್ಪೋರ್ಟ್ಸ್ ಕ್ಲಬ್ ಪರ ಆಡುತ್ತದ್ದ ಶಕೀಬ್ ಒಂದೇ ಪಂದ್ಯದಲ್ಲಿ ಎರಡಡು ಬಾರಿ ಅಂಪೈರ್ ವಿರುದ್ಧ ಕೋಪಗೊಂಡರು. ಸಂಪೂರ್ಣ ತಾಳ್ಮೆ ಕಳೆದುಕೊಂಡ ಶಕೀಬ್ ವಿಚಿತ್ರ ವರ್ತನೆ ಆಟಗಾರರನ್ನು ದಂಗು ಬಡಿಸಿತು.
ಇದನ್ನೂ ಓದಿ:ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?
ಬೌಲಿಂಗ್ ಮಾಡುತ್ತಿದ್ದ ಶಕೀಬ್ ಎಲ್ ಬಿಡಬ್ಲ್ಯೂ ಗೆ ಮನವಿ ಮಾಡಿದರು. ಆದರೆ ಅಂಪೈರ್ ತಿರಸ್ಕರಿಸಿದರು. ಇದರಿಂದ ಕೋಪಗೊಂಡ ಶಕೀಬ್ ವಿಕೆಟ್ ಗೆ ಕಾಲಿನಿಂದ ಒದ್ದು ಆಕ್ರೋಶ ಹೊರಹಾಕಿದರು. ಮತ್ತೊಂದು ಬಾರಿ ಮಳೆ ಬಂತೆಂದು ಅಂಪೈರ್ ಪಂದ್ಯ ಸ್ಥಗಿತಗೊಳಿಸಿದಾಗ ಫೀಲ್ಡಿಂಗ್ ಮಾಡುತ್ತಿದ್ದ ಶಕೀಬ್ ಓಡಿಬಂದು ವಿಕೆಟ್ ಗಳನ್ನು ಎತ್ತಿ ಒಗೆದರು.
ಘಟನೆಯ ಬಳಿಕ ಶಕೀಬ್ ಕ್ಷಮೆ ಕೇಳಿದ್ದು, ನಾನು ಕೋಪವನ್ನು ಹಿಡಿತದಲ್ಲಿಡಬೇಕಿತ್ತು. ಆದರೆ ದುರಾದೃಷ್ಟವಶಾತ್ ಅದಾಗಲಿಲ್ಲ. ಇಂತಹ ಘಟನೆ ಮುಂದೆ ಮರುಕಳಿಸುವುದಿಲ್ಲ ಎಂದು ಶಕೀಬ್ ಹೇಳಿದ್ದಾರೆ.