ದುಬೈ: ಬಾಂಗ್ಲಾದೇಶದ ಟೆಸ್ಟ್ ಮತ್ತು ಟಿ20 ತಂಡದ ನಾಯಕ ಶಕೀಬ್ ಅಲ್ ಹಸನ್ ದುಬೈನಲ್ಲಿ ನಡೆದ ವಾಣಿಜ್ಯ ಕಾರ್ಯಕ್ರಮವೊಂದರಲ್ಲಿ ಕಿರುಕುಳ ಅನುಭವಿಸಿದ ಘಟನೆ ನಡೆದಿದೆ.
ಆರವ್ ಖಾನ್ ಒಡೆತನದ ಚಿನ್ನದ ಆಭರಣ ಅಂಗಡಿಯನ್ನು ಉದ್ಘಾಟಿಸಲು ಶಕೀಬ್ ಅಲ್ ಹಸನ್ ದುಬೈಗೆ ತೆರಳಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕ್ಲಿಪ್ ನಲ್ಲಿ, ಶಕೀಬ್ ಕಾರ್ಯಕ್ರಮದ ಸ್ಥಳದಿಂದ ಹೊರಬರುವುದು ಕಂಡುಬಂದಿದೆ. ಈ ಸಮಯದಲ್ಲಿ, ಅವರು ಅಕ್ಷರಶಃ ಕಿರುಕುಳಕ್ಕೆ ಒಳಗಾದರು, ಜನರ ನೂಕುನುಗ್ಗಲಿನಲ್ಲಿ ಶಕೀಬ್ ಕೆಳಕ್ಕೆ ಬೀಳುವವರಿದ್ರು. ಸುತ್ತಲಿದ್ದವರು ಅವರ ಕೊರಳಪಟ್ಟಿಯನ್ನೂ ಎಳೆದರು. ಆ ಸ್ಥಳದಲ್ಲಿ ಸಂಪೂರ್ಣ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ಇದನ್ನೂ ಓದಿ:ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಭೇಟಿಯಾಗಲು ಮನೆ ಬಿಟ್ಟು ಜೈಲಿಗೆ ಹೊರಟ ಬಾಲಕಿಯರು
Related Articles
ಶಕೀಬ್ ಅವಸರದಲ್ಲಿದ್ದಾಗಲೇ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. 35 ವರ್ಷದ ಆಲ್ ರೌಂಡರ್ ಶಕೀಬ್ ಸುತ್ತ ಯಾವುದೇ ಭದ್ರತೆ ಇರಲಿಲ್ಲ.