ಮಂಗಳೂರು: ಯುಎನ್ ಸಿನೆಮಾಸ್ ಬ್ಯಾನರ್‌ನಡಿ ನಿತ್ಯಾನಂದ ನಾಯಕ್ ನರಸಿಂಗೆ ನಿರ್ಮಿಸಿ, ಶ್ರೀಶ ನಾಯಕ್ ಎಳ್ಳಾರೆ ನಿರ್ದೇಶನದ “ಶಕಲಕ ಬೂಮ್ ಬೂಮ್’ ತುಳು ಚಲನಚಿತ್ರ ಶುಕ್ರವಾರ ಕರಾ ವಳಿಯಾದ್ಯಂತ ತೆರೆ ಕಂಡಿದೆ.
ಸಿನೆಮಾ ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನೆಮಾಸ್, ಪಿವಿಆರ್, ಸಿನೆಪೊಲಿಸ್, ಉಡುಪಿ ಯಲ್ಲಿ ಕಲ್ಪನ, ಮೂಡುಬಿದಿರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಕಾರ್ಕಳ
ದಲ್ಲಿ ರಾಧಿಕ, ಪ್ಲಾನೆಟ್, ಸುರತ್ಕಲ್‌ನಲ್ಲಿ ನಟರಾಜ್, ಸಿನೆ ಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನೆಮಾಸ್, ಮಣಿಪಾಲದಲ್ಲಿ ಭಾರತ್ ಸಿನೆಮಾಸ್, ಐನಾಕ್ಸ್, ಪುತ್ತೂರಿನಲ್ಲಿ ಅರುಣ, ಭಾರತ್ ಸಿನೆಮಾಸ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಮಂಗಳೂರಿನ ಬಿಗ್ ಸಿನೆಮಾಸ್‌ನಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ತುಳು ಸಿನೆಮಾಗಳನ್ನು ಪ್ರೋತ್ಸಾಹಿಸುವ ಪ್ರೇಕ್ಷಕವರ್ಗ ಹೆಚ್ಚು ಸಂಖ್ಯೆಯಲ್ಲಿ ಸಿನೆಮಾ ಬೆಂಬಲಿಸಬೇಕು. ಹೀಗಾಗಿ ತುಳುವರು ಸಿನೆಮಾ ನೋಡಿ ಪ್ರೋತ್ಸಾಹ ಕೊಡಬೇಕು ಎಂದರು.
ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಶಕಲಕ ಬೂಂ ಬೂಂ ಚಿತ್ರದ ಟೈಟಲ್ ವಿಭಿನ್ನವಾಗಿದೆ. ತುಳು ಸಿನೆಮಾ ವೀಕ್ಷಿಸಿ ಜನರು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು.
ನಟಿಯರಾದ ಚೈತ್ರಾ ಶೆಟ್ಟಿ, ಲಕ್ಷಾ ಶೆಟ್ಟಿ, ಪ್ರಮುಖರಾದ ಕಿಶೋರ್ ಶೆಟ್ಟಿ, ಮಿಮಿಕ್ರಿ ಶರಣ್ ಉಪಸ್ಥಿತರಿದ್ದರು. ಯತೀಶ್ ಪೂಜಾರಿ ನಿರೂಪಿಸಿದರು.
ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್, ಕಥಾನಾಯಕನಾಗಿ ಗೊಡ್ವಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ ಸಹಿತ ಹಲವು ಕಲಾವಿದರು ಸಿನೆಮಾದಲ್ಲಿದ್ದಾರೆ. ತುಳು ಸಿನೆಮಾದಲ್ಲಿ ವೈವಿಧ್ಯ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಹೊಂದಿರುವ ಹೊಸತನದ ಚಿತ್ರ ಶಕಲಕ ಬೂಮ್ ಬೂಮ್ ಆಗಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ಮಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬಂದಿಯ ಕೊಲೆ ಯತ್ನ