Advertisement

ವಿಂಡೀಸ್‌ ಟೆಸ್ಟ್ ತಂಡಕ್ಕೆ ಮರಳಿದ ಶೈ ಹೋಪ್‌

07:47 AM Jun 10, 2021 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ಶೈ ಹೋಪ್‌ ಅವರನ್ನು ವೆಸ್ಟ್‌ ಇಂಡೀಸ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೈರನ್‌ ಪೊವೆಲ್‌, ಯುವ ವೇಗಿ ಜೇಡನ್‌ ಸೀಲ್ಸ್‌ ಕೂಡ 13ರ ಬಳಗದಲ್ಲಿದ್ದಾರೆ.

ಇದನ್ನೂ ಓದಿ:ಟೆಸ್ಟ್‌ ಆಲ್‌ರೌಂಡರ್‌ ರ್‍ಯಾಂಕಿಂಗ್‌ : ರವೀಂದ್ರ ಜಡೇಜ ನಂ.2

ಕಳೆದ ವರ್ಷದ ಇಂಗ್ಲೆಂಡ್‌ ವಿರುದ್ಧದ ಸರಣಿ ಬಳಿಕ ಶೈ ಹೋಪ್‌ ಅವರನ್ನು ಟೆಸ್ಟ್‌ ತಂಡದಿಂದ ಕೈಬಿಡಲಾಗಿತ್ತು. ಸರಣಿಯಲ್ಲಿ 2 ಟೆಸ್ಟ್‌ ನಡೆಯಲಿದ್ದು, ದ್ವಿತೀಯ ಪಂದ್ಯ ಇದೇ ಅಂಗಳದಲ್ಲಿ ಜೂ. 18ರಂದು ಮೊದಲ್ಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next